ಪಡುಮಾರ್ನಾಡು ಯುವಕ ಮಂಡಲದ ವತಿಯಿಂದ ಮಹಾವೀರ ಶಾಲೆಯಲ್ಲಿ ಪುಸ್ತಕ ವಿತರಣಾ ಸಮಾರಂಭ.
ಯುವಕ ಮಂಡಲ ರಿ ಅಮನೊಟ್ಟು ಪಡುಮಾರ್ನಾಡು ಇದರ ವತಿಯಿಂದ ಮಹಾವೀರ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಯಿಂದ ಯೇಳನೆ ತರಗತಿಯವರೆಗೆ ಕಲಿಯುವ ಎಲ್ಲಾ ಮಕ್ಕಳಿಗೆ ಸುಮಾರು 26 ವರ್ಷಗಳಿಂದ ಕೊಡಮಾಡಿಕೊಂದು ಬಂದಿರುವ ಪುಸ್ತಕ ವಿತರಣಾ ಕಾರ್ಯಕ್ರಮ ಇಂದು ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಸದಸ್ಯರೂ, ಯುವಕ ಮಂಡಲದ ಅಧ್ಯುಕ್ಷರು ಆದ ಶ್ರೀ ರಮೇಶ್ ಯಸ್ ಶೆಟ್ಟಿ ವಹಿಸಿ ಈ ಪುಸ್ತಕದ ಸದುಪಯೋಗವನ್ನು ಪಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಶ್ರೀ ಎ ಯತಿಂದ್ರ ರಾವ್ ಪಾಡಿಮನೆ, ಶಾಲಾ ನಿವೃತ್ತ ಮು್ಯೋಪಾಧ್ಯಾಯ ರಾದ ಶ್ರೀ ಜಯ ಬಿ, ಮೂಡಬಿದ್ರಿ ರಿಕ್ಷಾ ಮಾಲಕ ಚಾಲಕರ ಸಂಘ ಅಧ್ಯಕ್ಷ ಶ್ರೀ ಸಂತೋಷ್ ಶೆಟ್ಟಿ, ಪ್ರಜ್ಞಾ ಯುವತಿ ಮಂಡಲದ ಅಧ್ಯಕ್ಷೆ ಶಿಮತಿ ಸವಿತಾ ಹೆಗ್ಡೆ ಉಪಸ್ಥಿತರಿದ್ದರು.
ಯುವಕ ಮಂಡಲ ಕಾರ್ಯದರ್ಶಿ ಸಂದೀಪ್ ಆಚಾರ್ಯ ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಲ್ಲಿಕಾ ಧನ್ಯವಾದ ಸಲ್ಲಿಸಿದರು.
ಶಾಲಾ ಮಕ್ಕಳ ಸಮವಸ್ತ್ರ ಕರೀದಿಸಲು ಸಹಾಯ ಹಸ್ತ ನೀಡಿದ ಶ್ರೀ ಏ ಯಥಿಂದ್ರ ರಾವ್ ಪಾಡಿಮನೆ, ಮೂಡಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಆರಿಫ್, ಯುವತಿ ಮಂಡಲದ ಮಾಜಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಇವರನ್ನು ಅಭಿನಂದಿಸಲಾಯಿತು.
0 Comments