ಮೂಡುಬಿದಿರೆ: ಹಿರೇ ಅಮ್ಮನವರ ಬಸದಿಗೆ ನೂತನ ಧ್ವಜದಂಡ ಆಗಮನ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಹಿರೇ ಅಮ್ಮನವರ ಬಸದಿಗೆ ನೂತನ ಧ್ವಜದಂಡ ಆಗಮನ



ಮೂಡುಬಿದಿರೆ: ಮೂಡುಬಿದಿರೆಯ ಹಿರೇ ಅಮ್ಮನವರ ಬಸದಿಯ ನೂತನ ಧ್ವಜದಂಡವನ್ನು ಮಾಳದ ಮಂಜಲ್ತಾರ್‌ನಿಂದ ಬಸದಿಯ ಆವರಣಕ್ಕೆ ಸಕಲ ಸಂಭ್ರಮದಿಂದ ತರಲಾಯಿತು. 

ಭಾನುವಾರ ಬೆಳಗ್ಗೆ ಮಾಳದಲ್ಲಿ ರಾಜೇಂದ್ರ ಬಲ್ಲಾಳ್ ಇವರು ಪುಷ್ಪಾರ್ಚನೆಯ ಮೂಲಕ ಧ್ವಜದಂಡದ ಸಾಲಂಕೃತ ಮೆರವಣಿಗೆಗೆ ಚಾಲನೆ ನೀಡಿದರು. ಮಂಗಳೂರಿನ ಶ್ರೀ ಗಣೇಶ ಶಿಪ್ಪಿಂಗ್ ನವರು ಉಚಿತವಾಗಿ ಸಾಗಾಟ ನಡೆಸಿದ್ದರು. ಮಾಳ -ಹುಕ್ರಟ್ಟೆಯಿಂದ ಹೊರಟು ಬಜಗೋಳಿ, ನಲ್ಲೂರು ಕ್ರಾಸ್- ಚೆಂಡೆ ಬಸದಿ ಕ್ರಾಸ್, ನೆಲ್ಲಿ ಕಾರು, ಹೊಸ್ಮಾರ್, ಅಳಿಯೂರು, ಶಿರ್ತಾಡಿ, ಹುಕ್ಕುದಕಟ್ಟೆ ವಾಲ್ದಾಡಿ ಕ್ರಾಸ್ ಕೊಣಾಜೆ ಮಾರ್ಗವಾಗಿ ಮಧ್ಯಾಹ್ನ 3 ಗಂಟೆಗೆ ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನ ತಲುಪಿತು. ಅಲ್ಲಿ ಬೆಟ್ಕೇರಿ ವಿಮಲ್ ಕುಮಾರ್ ಧ್ವಜದಂಡವನ್ನು ಪುಷ್ಪಾರ್ಚನೆ ಮೂಲಕ ಸ್ವಾಗತಿಸಿದರು. ಬಳಿಕ ಮಂಗಲವಾದ್ಯ, ಕೀಲುಕುದುರೆ, ಕಲಶ ಹಿಡಿದ ವನಿತೆಯರು, ಶ್ರಾವಕ, ಶ್ರಾವಿಕೆಯರು ಧ್ವಜದಂಡವನ್ನು ಬರಮಾಡಿಕೊಂಡರು.

ಬಸದಿಯ ಆಡಳಿತ ಮೊಕ್ತೇಸರ ಭಾಸ್ಕರ ಎಸ್. ಕಟ್ಟೇಮಾರ್, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ , ಪ್ರಧಾನ ಕಾರ್ಯದರ್ಶಿ ರಾಜವರ್ಮ ಬೈಲಂಗಡಿ 

ಉಪಾಧ್ಯಕ್ಷರಾದ ಸುಧೀಶ್ ಕುಮಾರ್ ಆನಡ್ಕ, ಚೌಟರ ಅರಮನೆಯ ಕುಲದೀಪ ಎಂ., ಕಾರ್ಯದರ್ಶಿ ರಂಜಿತ್ ತಮನಂಗಡಿ, ಖಜಾಂಜಿ ಅನಂತಕೇಸರಿ ಕಟ್ಟೆಮಾರ್, ಪಟ್ಣಶೆಟ್ಟಿ ಸುದೇಶ್ ಕುಮಾರ್, ಆನಡ್ಕ ದಿನೇಶ್ ಕುಮಾರ್, ಆದರ್ಶ ಅರಮನೆ, ಶೈಲೇಂದ್ರ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯ ಸೂರಜ್ ಅರಿಗ, ಪ್ರಚಾರ ಸಮಿತಿಯ ಪ್ರಭಾತ್ ಬಲ್ನಾಡ್ , ವಾಸ್ತುತಜ್ಞ ಸುದರ್ಶನ ಕುಮಾರ್, ಹೇಮರಾಜ್ ಬೆಳ್ಳಿಬೀಡು, ಕೆ. ಕೃಷ್ಣರಾಜ ಹೆಗ್ಡೆ, ಪ್ರವೀಣಚಂದ್ರ, ಅರ್ಚಕ ಗುಣವರ್ಮ, ವಿವಿಧ ಜೈನ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

Post a Comment

0 Comments