ಹೊಸಬೆಟ್ಟು : ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ
ಮೂಡುಬಿದಿರೆ : ಪುಚ್ಚಮೊಗರು ಗ್ರಾಮದ ಬಾವದಬೈಲು ನಿತ್ಯಾನಂದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸೋಮವಾರ ಉಚಿತವಾಗಿ ಬ್ಯಾಗ್ ಗಳನ್ನು ವಿತರಿಸಲಾಯಿತು.
ಹೊಸಬೆಟ್ಟು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮಪ್ರಸಾದ್ ಜೈನ್ ಬಾವಗುತ್ತು ಅವರು ಬ್ಯಾಗ್ ವಿತರಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿವೆ, ಇದರಿಂದಾಗಿ ಮಕ್ಕಳಿಗೆ ಪೋಷಕರಿಗೆ ತೊಂದರೆ ಆಗುತ್ತದೆ. ಸರಕಾರಿ ಶಾಲೆಗಳು ಮುಚ್ಚಿದರೆ ಮುಂದಿನ ದಿನಗಳಲ್ಲಿ ಚುನಾವಣೆಗೆ ಬೂತ್ ಕೂಡ ಇರುವುದಿಲ್ಲ ಪಕ್ಕದ ವಾರ್ಡ್ ಗೆ ಹೋಗಬೇಕಾದ ಪರಿಸ್ಥಿತಿ ಬರಬಹುದು.
ಹಾಗಾಗಿ ನಾವೆಲ್ಲರೂ ಸೇರಿ ಗ್ರಾಮೀಣ ಭಾಗದಲ್ಲಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಕನ್ನಡ ಮಾಧ್ಯಮದ ಶಾಲಾ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಸರಕಾರ, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಮೂಡುಬಿದಿರೆ ಪತ್ರಕರ್ತರ ಸಂಘದ ಅಧ್ಯಕ್ಷ ಯಶೋಧರ ಅವರು ಸರಕಾರಿ- ಅನುದಾನಿತ ಕನ್ನಡ ಶಾಲೆಗಳ ಪ್ರಾಮುಖ್ಯತೆ, ಸಿಗುವ ಸಂತೋಷ, ಅವಕಾಶ ಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಅನುಪಮಾ ಸ್ವಾಗತಿಸಿದರು. ಗೌರವ ಶಿಕ್ಷಕಿ ವಂದಿಸಿದರು.
0 Comments