ಮಾಂಟ್ರಾಡಿ: ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಮಾಂಟ್ರಾಡಿ: ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಣೆ



ಮೂಡುಬಿದಿರೆ:  ಸ.ಉ.ಹಿ.ಪ್ರಾ. ಶಾಲೆ ಮಾಂಟ್ರಾಡಿಯ  ಹಳೆ ವಿದ್ಯಾರ್ಥಿಯಾಗಿರುವ ಹಾಗೂ ಪ್ರಸ್ತುತ ಇರ್ವತ್ತೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿರುವ ಡಾ. ಯಶೋಧರ್ ಎಂ ಅವರು ಶಾಲೆಗೆ ಪ್ರತಿ ವರ್ಷದಂತೆ ಕೊಡುಗೆಯಾಗಿ ನೀಡಿದ ಸುಮಾರು 50 ಸಾವಿರ ರೂ ಮೌಲ್ಯದ ಶಾಲಾ ಬ್ಯಾಗ್ ನೋಟ್ ಪುಸ್ತಕ ಹಾಗೂ ಇತರ ಕಲಿಕಾ ಪರಿಕರಗಳ ವಿತರಣಾ ಕಾರ್ಯಕ್ರಮವು ಸೋಮವಾರ ನಡೆಯಿತು.

 ಯಶೋಧರ್ ಅವರ ಮಾತೃಶ್ರೀಯವರಾದ ರುಕ್ಮಿಣಿ ಅಮ್ಮನವರು ಹಾಗೂ ಅವರ ಧರ್ಮಪತ್ನಿ ಯಶವಂತಿ ಅವರು ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ  ಯಶವಂತಿಯವರನ್ನು ಶಾಲಾ ಪರವಾಗಿ ಸನ್ಮಾನಿಸಲಾಯಿತು. ಕೊಡುಗೆ ನೀಡಿದ ಡಾ. ಯಶೋಧರ್ ಎಂ ಅವರನ್ನು ಶಾಲಾ ಶಿಕ್ಷಕರು ಎಸ್ ಡಿ ಎಮ್ ಸಿ ಹಾಗೂ ವಿದ್ಯಾರ್ಥಿಗಳ ಪರವಾಗಿ ಗೌರವಿಸಲಾಯಿತು.

Post a Comment

0 Comments