ಬೆಂಗಳೂರಿನ ಅಂಬಾ ಸಂಸ್ಥೆಯಿಂದ ಮೂಡುಬಿದಿರೆಯ ಸ್ಪೂರ್ತಿ ವಿಶೇಷ ಶಾಲೆಗೆ ಕಂಪ್ಯೂಟರ್ ಕೊಡುಗೆ
ಮೂಡುಬಿದಿರೆ: ಬೆಂಗಳೂರಿನಲ್ಲಿ ವಿಶೇಷ ಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ *ಅಂಬಾ* ಸಂಸ್ಥೆಯು ಮೂಡುಬಿದಿರೆಯ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ನೀಡಲು 20 ಲ್ಯಾಪ್ ಟಾಪ್ ಗಳನ್ನು ಉಚಿತವಾಗಿ ನೀಡಿದ್ದು ಇದರ ಹಸ್ತಾಂತರ ಕಾರ್ಯಕ್ರಮವು ಗುರುವಾರ ಬೆಂಗಳೂರಿನ ಅಂಬಾ ಸಂಸ್ಥೆಯಲ್ಲಿ ನಡೆಯಿತು.
ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕರಾದ ಪ್ರಕಾಶ್ ಜೆ .ಶೆಟ್ಟಿಗಾರ್ ಹಾಗೂ ಶಾಲಾ ಶಿಕ್ಷಕಿ ಕು. ಸುಚಿತ್ರ ಇವರು ದಾನಿಗಳಿಂದ ಲ್ಯಾಪ್ ಟಾಪ್ ಅನ್ನು ಸ್ವೀಕರಿಸಿದರು. ದಾನಿಗಳಿಗೆ ಸಂಸ್ಥೆಯ ಪರವಾಗಿ ಹಾಗೂ ವಿಶೇಷ ಮಕ್ಕಳ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಲಾಯಿತು.
0 Comments