ಮೂಡುಬಿದಿರೆಯಲ್ಲಿ " ರೈತ-ವಿಜ್ಞಾನಿ" ಸಂವಾದ
ಶಾಸಕ ಉಮಾನಾಥ ಕೋಟ್ಯಾನ್ ಗೆ ಸನ್ಮಾನ
ಭಾರತೀಯ ಕಿಸಾನ್ ಸಂಘ (ರಿ.) ಮೂಡುಬಿದಿರೆ ತಾಲೂಕು ಮತ್ತು ತೋಟಗಾರಿಕಾ ಇಲಾಖೆ ಇವುಗಳ ಜಂಟಿ ಆಶ್ರಯದಲ್ಲಿ ತೋಟಗಾರಿಕಾ ಕೃಷಿಯಲ್ಲಿ ಮಳೆಗಾಲದ ಸಮಸ್ಯೆಗಳ ಕುರಿತು "ರೈತ - ವಿಜ್ಞಾನಿ ಸಂವಾದ ಕಾರ್ಯಕ್ರಮವು ಶ್ಯಾಮಿಲಿ ಎನ್ಕ್ಲೈವ್ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಭಾರತೀಯ ಕಿಸಾನ್ ಸಂಘ(ರಿ) ಕರ್ನಾಟಕ ದಕ್ಷಿಣ ಪ್ರಾಂತದ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ವಿಶೇಷ ಆಹ್ವಾನಿತರಾಗಿ ಶಾಸಕ ಉಮಾನಾಥ ಕೋಟ್ಯಾನ್ ಭಾಗವಹಿಸಿದ್ದು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಭಾರತೀಯ ಕಿಸಾನ್ ಸಂಘದ ದ.ಕ.ಜಿಲ್ಲಾಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಂಕನಾಡಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಕೇದಾರನಾಥ್ ಮತ್ತು ಮೂಡುಬಿದಿರೆ ತೋಟಗಾರಿಕೆ ಇಲಾಖೆಯ ಯುಗೇಂದ್ರ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಉದ್ಯಮಿ ರಂಜಿತ್ ಪೂಜಾರಿ, ರಾಜ್ಯ ಕ್ರೈಸ್ತ ನಿಗಮದ ಮಾಜಿ ಅಧ್ಯಕ್ಷ ಜೊಯ್ಲಸ್ ತಾಕೋಡೆ, ಬಿಜೆಪಿ ಮುಖಂಡ ಜಯಾನಂದ ಮುಲ್ಕಿ, ಪ್ರವೀಣ್ ಮತ್ತಿತರರು ಈ ಸಂದರ್ಭದಲ್ಲಿದ್ದರು.
0 Comments