ಮಾಜಿ ಸಚಿವ ಅಭಯಚಂದ್ರ ಜೈನ್ ಗೆ ಜೀವ ಬೆದರಿಕೆ

ಜಾಹೀರಾತು/Advertisment
ಜಾಹೀರಾತು/Advertisment

 ಮಾಜಿ ಸಚಿವ ಅಭಯಚಂದ್ರ ಜೈನ್ ಗೆ ಜೀವ ಬೆದರಿಕೆ




     ಮೂಡುಬಿದಿರೆ:  ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಮಿಥುನ್‌ ರೈ ಪರ ಭಾರೀ ಪ್ರಚಾರ ಮಾಡ್ತೀಯಾ, ನಿನ್ನನ್ನು ಸುಮ್ಮನೆ ಬಿಡೋದಿಲ್ಲ ಎಂದು ತನಗೆ ಭೂಗತ ಲೋಕದವರೆಂದು ಹೇಳಿಕೊಂಡ ವ್ಯಕ್ತಿಗಳು   ಜೀವಬೆದರಿಕೆಯೊಡ್ಡಿದ್ದಾರೆಂದುಮಾಜಿ ಸಚಿವ ಕೆ.ಅಭಯಚಂದ್ರ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

 

    ಈ ಬಗ್ಗೆ  ಪತ್ರಿಕಾಗೋಷ್ಠಿಯಲ್ಲಿ ಜೈನ್ ಅವರು ಮಾಹಿತಿ ನೀಡಿದರು.

 "ಇಂತಹ ಬೆದರಿಕೆಗಳಿಗೆಲ್ಲಾ ಅಭಯ ಚಂದ್ರ ಬಗ್ಗುವವನಲ್ಲ, ನನ್ನ ಸಾವನ್ನು ದೇವರು ನಿರ್ಧರಿ ಸಿರುತ್ತಾನೆ, ಇಂತಹ ಚಿಲ್ಲರೆಗಳ ಬೆದರಿಕೆಗಳಿಗೆ ತಲೆಕೆಡಿಸಿ ಕೊಳ್ಳುವವನಲ್ಲ" ಎಂದವರು ಪ್ರತಿಕ್ರೀಯಿಸಿದ್ದಾರೆ.

ಹಿಂದೆ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣ ನಡೆದಾಗ ಅಭಯರಿಗೆ ಭೂಗತ ವ್ಯಕ್ತಿಗಳಿಂದ ಜೀವ ಬೆದರಿಕೆಯೊಡ್ಡಿದ್ದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅಭಯರಿಗೆ ಕೆಲಕಾಲ ಭದ್ರತೆ ಒದಗಿಸಲಾಗಿತ್ತು. ಆದರೆ ಇದೀಗ ಚುನಾವಣೆ ಸಂದರ್ಭದಲ್ಲಿ ಮತ್ತೊಮ್ಮೆ  ಹಿರಿಯರೂ, ಮಾಜಿ ಸಚಿವರೂ ಆಗಿರುವ ಅಭಯರಿಗೆ ಮತ್ತೆ ಜೀವ ಬೆದರಿಕೆಯೊಡ್ಡಿದ್ದಾರೆಂದು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

           .

Post a Comment

0 Comments