ಮೂಡುಬಿದಿರೆಯಲ್ಲಿ ಶ್ರೀ ಮಹಾವೀರರ ೨೬೨೨ರ ಜನ್ಮ ಕಲ್ಯಾಣ ಉತ್ಸವ
ಮೂಡುಬಿದಿರೆ : ಜೈನ ಕಾಶಿ ಮೂಡುಬಿದಿರೆಯ ಸಾವಿರ ಕಂಬದ ಬಸದಿಯ ಕಿರಿಯ ರಥೋತ್ಸವದೊಂದಿಗೆ ಸಂಜೆ ಜರಗಿತು.
ಮಹಾವೀರರ ೨೬೨೨ನೇ ಜನ್ಮಕಲ್ಯಾಣ ಉತ್ಸವವನ್ನು ಮಾಲ್ದಬೆಟ್ಟು ಜಯಪ್ರಕಾಶ್ ಪಡಿವಾಳ್ ಉದ್ಘಾಟಿಸಿದರು.
ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಮಹಾವೀರ ಜ್ಯೋತಿ ಬೆಳಗಿಸಿದರು.
ಮಹಾವೀರ ಸ್ವಾಮಿ ಕ್ಷತ್ರಿಯ ಜೈನಕುಲ ದಲ್ಲಿ ಹುಟ್ಟಿ ನಾನಾ ರೀತಿಯ ಸವಾಲುಗಳನ್ನು ಎದುರಿಸಿದವರು. ಕಾಮ, ಕ್ರೋಧ ನಮ್ಮಂತರಂಗದಲ್ಲಿಯೇ ಇವೆ. ಅವುಗಳನ್ನು ರತ್ನತ್ರಯ ಧರ್ಮದ ತಿರುಳು ತಿಳಿದು ಪಾಲಿಸಿ, ಶುದ್ಧ ಆತ್ಮನಾಗಿ, ಭಗವಂತನಾಗುವ ಮೋಕ್ಷಮಾರ್ಗ ಬೋಧಿಸಿ ಲೋಕ ಪ್ರಿಯರಾದವರು ಮಹಾವೀರರು ಎಂದು ಭಟ್ಟಾರಕ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಸಮ್ಮಾನ: ಜಯಪ್ರಕಾಶ ಪಡಿವಾಳ್ ಹಾಗೂ ರಶ್ಮಿತಾ ಯುವರಾಜ್ ಇವರನ್ನು ಧವಳತ್ರಯ ಜೈನಕಾಶಿ ಟ್ರಸ್ಟ್ ವತಿಯಿಂದ ಸ್ವಾಮೀಜಿ ಸನ್ಮಾನಿಸಿದರು.
ಕಲ್ಲಬೆಟ್ಟು ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿಗಳಿಂದ ``ಭರತ ಬಾಹುಬಲಿ' ನಾಟಕ, ಜಿನ `ಭಜನೆ ಕಾರ್ಯಕ್ರಮಗಳು ಜೈನಮಠ ಹಾಗೂ `ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ )ವತಿಯಿಂದ ಜರಗಿದವು.
ಡಾ. ಪ್ರಭಾತ್ ಬಲ್ನಾಡು ಕಾರ್ಯಕ್ರಮ ನಿರೂಪಿಸಿದರು. ಬಸದಿಗಳ ಮೊಕ್ತೇಸರರಾದ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ಎ. ದಿನೇಶ್ ಕುಮಾರ್ ಬೆಟ್ಕೇರಿ, ಆದರ್ಶ್ ಅರಮನೆ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಪ್ರಭಾತ್ ಚಂದ್ರ, ವೃಂದಾ ರಾಜೇಂದ್ರ, ಅಜಿತ್‌ಪ್ರಸಾದ್, ಶ್ರವಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು, ರಾತ್ರಿ ಕಿರಿಯ ರಥೋತ್ಸವ ಜರಗಿತು.
.
0 Comments