ಹೊಸ ಕರೆಯೊಂದಿಗೆ ಹಳೆ ನೆನಪುಗಳನ್ನು ಮೆಲುಕು ಹಾಕಲಿದೆ ಪಣಪಿಲ ಕಂಬಳ:ನಾಳೆ 13ನೇ ವರ್ಷದ ಕಂಬಳೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಹೊಸ ಕರೆಯೊಂದಿಗೆ ಹಳೆ ನೆನಪುಗಳನ್ನು ಮೆಲುಕು ಹಾಕಲಿದೆ ಪಣಪಿಲ ಕಂಬಳ:ನಾಳೆ 13ನೇ ವರ್ಷದ ಕಂಬಳೋತ್ಸವ




ಪಣಪಿಲ ಕಂಬಳ. ಇದು ಹೊಸ ವೇಳೆ ವಿಷಯವಲ್ಲ. ಅನಾದಿಕಾಲದಿಂದಲೂ ಗ್ರಾಮದಲ್ಲಿ ನಡೆದುಕೊಂಡು ಬರುತ್ತಿರುವ ಜನಪದ ಕ್ರೀಡೆ. ಪಣಪಿಲ ಗ್ರಾಮದಲ್ಲಿಯೂ ಈ ಕಂಬಳಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ವ್ಯವಸಾಯದ ಸಮಯದಲ್ಲಿ ಅನೇಕ ಕೃಷಿಕರು ಈ ಕಂಬಳ ಕ್ರೀಡೆಯನ್ನು ನಡೆಸಿಕೊಂಡು ಬರುತ್ತಿದ್ದರು. ಆದರೆ ಕೆಲವು ಕಡೆಗಳಲ್ಲಿ ಇದು ಸಾಂಪ್ರದಾಯಿಕ ಕಂಬಳವಾಗಿ ಬದಲಾಯಿತು.‌ಈ ಹಿಂದೆ ಪಣಪಿಲ ಅರಮನೆಗೆ ಸಂಬಂಧಿಸಿದ ಗದ್ದೆಯಲ್ಲಿ ಸಾಂಪ್ರದಾಯಿಕ ಕಂಬಳ ನಡೆಯುತ್ತಿತ್ತು. 



ಜಯ-ವಿಜಯ ಜೋಡುಕರೆ ಕಂಬಳ...

ಪಣಪಿಲದಲ್ಲಿ ನಡೆಯಲಿರುವ ಜೋಡುಕರೆ ಕಂಬಳ ಹದಿಮೂರನೇ ವರ್ಷದ್ದಾಗಿದೆ. ಈ ಹಿಂದಿನ 12 ವರ್ಷಗಳ ಕಾಲ ನಂದೊಟ್ಟು ಬಾಕಿಮಾರು ಗದ್ದೆಯಲ್ಲಿ ಈ ಕಂಬಳ ಕಾರ್ಯಕ್ರಮ ನಡೆಯಿತು. ಇದೀಗ ಕಂಬಳದ ಕರೆ ಬದಲಾವಣೆ ಮಾಡಲಾಗಿದ್ದು ಸುಮಾರು ಅರ್ಧ ಕಿಮೀ ದೂರದಲ್ಲಿ ಹೊಸ ಕಂಬಳ ಕರೆ ನಿರ್ಮಾಣಗೊಳಿಸಲಾಗಿದೆ. ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮನಾಥ್ ಕೋಟ್ಯಾನ್ ರವರ ಗೌರವ ಅಧ್ಯಕ್ಷತೆಯಲ್ಲಿ ಈ ಕಂಬಳ ನಡೆಯಲಿದೆ. ಅಧ್ಯಕ್ಷರಾಗಿ ಯುವರಾಜ್ ಜೈನ್, ಕಾರ್ಯಾಧ್ಯಕ್ಷರಾಗಿ ಸುಭಾಷ್ ಚೌಟ,ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಥ್ ಪಣಪಿಲ ರವರು ಕಾರ್ಯನಿರ್ವಹಿಸುತ್ತಿದ್ದಾರೆ.


ಸ್ನೇಹ ಕೂಟ ಕಂಬಳ ಆಗಿದ್ದರೂ ಮೊದಲ ಬಾರಿಗೆ ಹೊನಲು ಬೆಳಕಿನ ಕಂಬಳವನ್ನು ನಡೆಸಲಾಗುತ್ತದೆ. ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ನೀರಿನ ವ್ಯವಸ್ಥೆಯನ್ನು ಕಂಬಳ ಸಮಿತಿ ಆಯೋಜಿಸಿದ್ದು ಹೊಸ ಕರೆಯ ಕಂಬಳವನ್ನು ಯಾವ ಕೊರತೆಯೂ ಇಲ್ಲದ ಹಾಗೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಮಿತಿ ಹೊತ್ತಿದೆ.

Post a Comment

0 Comments