5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ ಇಟಲದ ಹೊಸ ದೇಗುಲ: ವಿಜ್ಞಾಪಣೆ ಪತ್ರ ಬಿಡುಗಡೆಗೊಳಿಸಿದ ಜೀರ್ಣೋದ್ಧಾರ ಸಮಿತಿ
ಮೂಡುಬಿದಿರೆಯ ದರೆಗುಡ್ಡೆ ಗ್ರಾಮದಲ್ಲಿರುವ ಪಣಪಿಲ ಅರಮನೆಯ, ಕೊನ್ನಾರ ಮಾಗಣೆಯ ಶ್ರೀ ಕ್ಷೇತ್ರ ಇಟಲ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಯು ಚಾಲನೆಯಲ್ಲಿದ್ದು ಈಗಾಗಲೇ ಗರ್ಭಗುಡಿಯ ಕೆಲಸ ಭಾಗಶಃ ನಡೆದಿದೆ.
ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ನೇತೃತ್ವದಲ್ಲಿ ಗರ್ಭಗುಡಿಯ ಕೆಲಸವು ನಡೆಯುತ್ತಿದೆ. ಸುತ್ತುಪೌಳಿ, ದೈವಗಳ ಆಲಯ, ನಾಗಬನ, ಸಭಾಂಗಣ ಸೇರಿದಂತೆ ಅನೇಕ ಕಾಮಗಾರಿಗಳಿಗಾಗಿ ಒಟ್ಟು ಐದು ಕೋಟಿ ರೂಪಾಯಿಗಳ ಅಂದಾಜು ಯೋಜನೆಯನ್ನು ಸಿದ್ದಪಡಿಸಲಾಗಿದೆ.
ಶ್ರೀ ಕ್ಷೇತ್ರ ಇಟಲದಲ್ಲಿ ಕ್ಷೇತ್ರದ ಜೀರ್ಣೋದ್ಧಾರದ ವಿಜ್ನಾಪನಾ ಪತ್ರ ಬಿಡುಗಡೆಯಾಗಿದ್ದು ಪಣಪಿಲ ಅರಮನೆಯ ಮುಖ್ಯಸ್ಥರಾದ ವಿಮಲ್ ಕುಮಾರ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಸುಕೇಶ್ ಶೆಟ್ಟಿ ಎದಮೇರು, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಅರಿಗ, ಕೋಶಾಧಿಕಾರಿ ಸುದೀಶ್ ಕುಮಾರ್ ಹಾಗೂ ಜೀರ್ಣೋದ್ಧಾರ ಸಮಿತಿಯ ಪ್ರಮುಖರು, ಉಪ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.
0 Comments