ಮೂಡುಬಿದಿರೆ ಪುರಸಭೆಯಲ್ಲಿ 31.07ಕೋ. ಮಿಗತೆ ಬಜೆಟ್ ಮಂಡನೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಪುರಸಭೆಯಲ್ಲಿ 31.07ಕೋ. ಮಿಗತೆ ಬಜೆಟ್ ಮಂಡನೆ



ಮೂಡುಬಿದಿರೆ : ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ  ಪುರಸಭಾ ವಿಶೇಷ ಸಭೆಯಲ್ಲಿ 2023-24 ನೇ ಸಾಲಿನಲ್ಲಿ 30.31ಕೋಟಿ ಆದಾಯ ಮತ್ತು 30.10 ಕೋಟಿ ಖರ್ಚಿನೊಂದಿಗೆ 31.07 ಲಕ್ಷದ ಮಿಗತೆ ಆಯವ್ಯಯದ ಬಜೆಟ್‌ನ್ನು ಮಂಡಿಸಿದೆ. ಬಜೆಟ್‌ನ ಆದಾಯದಲ್ಲಿ ಆಸ್ತಿ ತೆರಿಗೆ 2.77 ಕೋಟಿ, ನೀರಿನ ಶುಲ್ಕ 1.05 ಕೋಟಿ, ಎಸ್‌ಎಫ್‌ಸಿ ವೇತನ ಅನುದಾನ 1 ಕೋಟಿ, ಎಸ್‌ಎಫ್‌ಸಿ ವಿದ್ಯುತ್ ಅನುದಾನ 3.25 ಕೋಟಿ, ಎಸ್‌ಎಫ್‌ಸಿ ವಿಶೇಷ ಅನುದಾನ 1 ಕೋಟಿ, 15 ನೇ ಹಣಕಾಸಿನ ಸಾಮಾನ್ಯ ಮೂಲ ಅನುದಾನ 2 ಕೋಟಿ, ವಾಣಿಜ್ಯ ಮಳಿಗೆಗಳ ಬಾಡಿಗೆ 80 ಲಕ್ಷ, ಕಟ್ಟಡ ಪರವಾನಗಿ ಮತ್ತು ನವೀಕರಣ 50 ಲಕ್ಷ, ಕಟ್ಟಡ ಅಭಿವೃದ್ಧಿ ಶುಲ್ಕ 30 ಲಕ್ಷ, ಮಾರ್ಕೆಟ್ ವರಿ ವಸೂಲಿ 75 ಲಕ್ಷ, ವ್ಯಾಪಾರ ಪರವಾನಗಿ 16 ಲಕ್ಷ. ಮನೆಮನೆ ಕಸ ಸಂಗ್ರಹ ಶುಲ್ಕ 50 ಲಕ್ಷ, ಖಾತಾ ಬದಲಾವಣೆ 50ಲಕ್ಷ, ಎಸ್ ಎಫ್ ಸಿ ಮುಕ್ತ ನಿಧಿ 75 ಲಕ್ಷ, ಸ್ವಚ್ಛ ಭಾರತ್ ಮಿಷನ್ ಅನುದಾನ 25 ಲಕ್ಷ, ಅಮೃತ ನಿರ್ಮಲ ನಗರ ಯೋಜನೆ 50 ಲಕ್ಷ, ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ 15 ಲಕ್ಷ, ಇತರ ಅನುದಾನಗಳು 30 ಲಕ್ಷ ಹಾಗೂ ಇತರ ಆದಾಯಗಳು ಒಳಗೊಂಡಿದೆ. 

ಬಜೆಟ್‌ನ ಖರ್ಚಿನಲ್ಲಿ ವೇತನಗಳು, ಭತ್ಯೆಗಳು, 1.31 ಕೋಟಿ, ಬೀದಿ ದೀಪ ವಿದ್ಯುತ್ ದೀಪ ವೆಚ್ಚಗಳು 1.25 ಕೋಟಿ, ಪೌರಕಾರ್ಮಿಕರ ವೇತನ 1 ಕೋಟಿ, ನೀರು ಸರಬರಾಜು ವಿದ್ಯುತ್ ವೆಚ್ಚ2 ಕೋಟಿ, ರಸ್ತೆಗಳು, ಕಲ್ಲುಹಾಸು, ಮತ್ತು ಪಾದಾಚಾರಿ ಮಾರ್ಗಗಳ ರಚನೆ 2.50 ಕೋಟಿ, ಬೀದಿದೀಪ, ಸಂಚಾರಿ ದೀಪ, ಕಂಬಗಳ ಅಳವಡಿಕೆ 1 ಕೋಟಿ, ಬಾಕ್ಸ್ ಚರಂಡಿ ನಿರ್ಮಾಣ 1 ಕೋಟಿ, ಕಟ್ಟಡ ದುರಸ್ಥಿ ಮತ್ತು ನಿರ್ವಹಣೆ 15 ಲಕ್ಷ, ಕಟ್ಟಡಗಳ ವಿದ್ಯುತ್ ವೆಚ್ಚಗಳು 20 ಲಕ್ಷ, ರಸ್ತೆ ಮತ್ತು ಚರಂಡಿ ದುರಸ್ಥಿ ಮತ್ತು ನಿರ್ವಹಣೆ 60 ಲಕ್ಷ, ಬೀದಿದೀಪ ನಿರ್ವಹಣೆ 30 ಲಕ್ಷ ಹಾಗೂ ಇತರ ವೆಚ್ಚಗಳು ಸೇರಿದೆ. ಉಪಾಧ್ಯಕ್ಷೆ ಸುಜಾತ ಶಶಿಧರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ ,ಪರಿಸರ ಇಂಜಿನಿಯರ್ ಶಿಲ್ಪಾ, ಲೆಕ್ಕಾಧಿಕಾರಿ ಸೀಮಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments