ಅಶ್ವತ್ಥನಾರಾಯಣ ವಿರುದ್ಧ ಕ್ರಮಕ್ಕೆ ಮಾಜಿ ಸಚಿವ ಜೈನ್

ಜಾಹೀರಾತು/Advertisment
ಜಾಹೀರಾತು/Advertisment

 ಅಶ್ವತ್ಥನಾರಾಯಣ ವಿರುದ್ಧ ಕ್ರಮಕ್ಕೆ ಮಾಜಿ ಸಚಿವ ಜೈನ್ ಆಗ್ರಹ



ಮೂಡುಬಿದಿರೆ: ಉನ್ನತ ಶಿಕ್ಷಣ ಸಚಿವ ಡಾ.ಸಿ ಅಶ್ವತ್ಥನಾರಾಯಣ ಅವರು ಮಂಡ್ಯದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಟಿಪ್ಪುಸುಲ್ತಾನನ್ನು ಹೊಡೆದು ಹಾಕಿದಂತೆ  ಹೊಡೆದು ಹಾಕಬೇಕು ಎಂದಿರುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮತ್ತು ರಾಷ್ಟçಪತಿಯವರು ಮುಖ್ಯಮಂತ್ರಿಗೆ ಸೂಚನೆ ನೀಡಬೇಕು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆಗ್ರಹಿಸಿದ್ದಾರೆ. 

ಗುರುವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 

 ಮಾಜಿ ಪ್ರಧಾನಿ ವಾಜಪೇಯಿ ಅವರಂತಹ ಮುತ್ಸದ್ಧಿ ರಾಜಕಾರಣಿಗಳನ್ನು ಹೊಂದಿದ್ದ ಬಿಜೆಪಿಯಲ್ಲಿ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಕೋಮು ಭಾವನೆ ಕೆರಳಿಸುವಂತಹ ಮಾತು ಆಡಿರುವುದು ಅವರ ಮತ್ತು ಬಿಜೆಪಿ ನಾಯಕರ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ. ಮತಪಡೆಯವುದಕ್ಕಾಗಿ ಇನ್ನೊಂದು ಪಕ್ಷದ ನಾಯಕರನ್ನು ಟೀಕಿಸುವ ಭರಾಟೆಯಲ್ಲಿ ಕೆಟ್ಟ ಪದಗಳನ್ನು ಬಳಸುವುದು ಯಾವ ನಾಯಕರಿಗೂ ಶೋಭೆ ತರುವಂತದಲ್ಲ ಎಂದರು. ಆಕ್ಷೇಪಾರ್ಹ ಮತ್ತು ತುಚ್ಚವಾದ ಮಾತುಗಳನ್ನು ಆಡಿರುವ

 ಶಿಕ್ಷಣ ಸಚಿವರ ಮಾತು ಪ್ರಜ್ಞಾವಂತರು ತಲೆತಗ್ಗಿಸುವಂತೆ ಮಾಡಿದೆ ಎಂದು ಹೇಳಿದರು.

Post a Comment

0 Comments