ಉಳ್ಳಾಲದಲ್ಲಿ ಸ್ಪರ್ಧಿಸುತ್ತಾರಾ ಭರತ್ ಶೆಟ್ಟಿ.?ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಹೋರಾಟಗಾರನ ಹೆಸರು.!
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸುಲಭದ ಮಾತಲ್ಲ. ಅತಿಹೆಚ್ಚು ಮುಸ್ಲಿಂ ಮತಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಯುಟಿ ಖಾದರ್ ಅನೇಕ ವರ್ಷಗಳಿಂದ ಇಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಲೇ ಬರುತ್ತಿದ್ದಾರೆ. ಇದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳಿಗೆ ಅತಿದೊಡ್ಡ ಸವಾಲಾಗಿದೆ.
ಇದೀಗ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೂಲತಃ ಉಳ್ಳಾಲದವರೇ ಆಗಿರುವ ಬೆಂಗಳೂರಿನ ಉದ್ಯಮಿ ಹಾಗೂ ಹೋರಾಟಗಾರ ಭರತ್ ಶೆಟ್ಟಿಯವರ ಹೆಸರು ಜೋರಾಗಿಯೇ ಕೇಳಿಬರುತ್ತಿದೆ. ಭರತ್ ಶೆಟ್ಟಿಯವರು ಬೆಂಗಳೂರಿನಲ್ಲಿ ಉದ್ಯಮವನ್ನು ಕಟ್ಟಿಕೊಂಡು ಬೆಳೆದವರು. ದೇಶಪ್ರೇಮಿಗಳ ಪಡೆ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಕನ್ನಡ ಪರ ಸಂಘಟನೆಯಾಗಿಯೂ ಗುರುತಿಸಿಕೊಂಡವರು ಭರತ್ ಶೆಟ್ಟಿ. ತುಳು ಭಾಷೆಯ ವಿಚಾರದಲ್ಲೂ ಅತೀವ ಆಸಕ್ತಿಯನ್ನು ವಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಹಿಂದೂ ಸಂಘಟನೆಯ ಯುವಕರಿಗೆ ಸಹಾಯ ಮಾಡುತ್ತಾ ಜೈಲಿನಲ್ಲಿರುವ ಅಮಾಯಕ ಹಿಂದೂ ಕಾರ್ಯಕರ್ತರ ಬಿಡುಗಡೆಗೆ ಅಮೂಲಾಗ್ರ ಸಹಕಾರ ನೀಡಿದವರು ಭರತ್ ಶೆಟ್ಟಿ. ಇತ್ತೀಚೆಗೆ ಮೋದಿ ವಿರೋಧಿ ರೈತ ನಾಯಕ ಟಿಕಾಯತ್ ಗೆ ಮಸಿ ಬಳಿದು ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಮತ್ತಷ್ಟು ಹತ್ತಿರವಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಭರತ್ ಶೆಟ್ಟಿ ಹೆಸರು ಸ್ವತಃ ಅಲ್ಲಿನ ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದಲೇ ಕೇಳಿಬರುತ್ತಿದೆ.
ಕಳೆದ ಚುನಾವಣೆಯಲ್ಲಿ ಇಲ್ಲಿ ಸಂತೋಷ್ ಕುಮಾರ್ ಬೋಳಿಯಾರ್ ರವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಈ ಬಾರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸತೀಶ್ ಕುಂಪಲರವರಿಗೆ ಟಿಕೆಟ್ ನೀಡುವ ಬಗ್ಗೆ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ಸಂಸದರು, ಸಚಿವರ ಅನುದಾವನ್ನು ತಮ್ಮ ಕ್ಷೇತ್ರಕ್ಕೆ ಕೊಂಡೊಯ್ಯುವಲ್ಲಿ ಸತೀಶ್ ಕುಂಪಲ ಯಶಸ್ವಿಯಾಗಿದ್ದರು. ಕ್ಷೇತ್ರದಲ್ಲಿ ಅವರ ಬಗ್ಗೆ ಸರಳತೆಯ ವ್ಯಕ್ತಿ ಹಾಗೂ ಉತ್ತಮ ನಡೆಯ ವ್ಯಕ್ತಿ ಎಂಬ ಹೆಸರೂ ಇದೆ. ಬಿಜೆಪಿ ಹಿರಿಯ ನಾಯಕರ ಕೃಪಾ ಕಟಾಕ್ಷವೂ ಇವರ ಮೇಲಿದ್ದು ಟಿಕೆಟ್ ಸಿಗುವ ಭರವಸೆಯಲ್ಲಿದ್ದಾರೆ.
ಒಟ್ಟು ಉಳ್ಳಾಲ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಯುಟಿ ಖಾದರ್ ಓಟಕ್ಕೆ ಬ್ರೇಕ್ ಹಾಕುವ ಸಾಮಥ್ರ್ಯ ಯಾರಲ್ಲಿದೆ ಎಂಬುದು ಚುನಾವಣಾ ಸಂದರ್ಭದಲ್ಲೇ ಗೊತ್ತಾಗಬೇಕಿದೆ. ಪ್ರತೀ ಚುನಾವಣೆಯಲ್ಲಿ ಯುಟಿ ಖಾದರ್ ರವರಿಗೆ ಮತಗಳ ಅಂತರ ಕಡಿಮೆ ಆಗುತ್ತಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಭರವಸೆ ನೀಡಿದೆ.
0 Comments