ಕಡೆಗೂ ವೇಣೂರಿಗೆ ಎಂಟ್ರಿ ಕೊಟ್ಟ ರೋಹಿತ್ ಚಕ್ರತೀರ್ಥ:ಸವಾಲು ಗೆದ್ದಿದ್ದೇವೆ ಎಂದ ಕಾರ್ಯಕರ್ತರು
ತೀವ್ರ ವಿವಾದಕ್ಕೆ ಕಾರಣವಾಗಿದ್ದ ವೇಣೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಚಿಂತಕ ರೋಹಿತ್ ಚಕ್ರತೀರ್ಥರ ಆಗಮನ ನಿರೀಕ್ಷೆಯಂತೆ ವಿರೋಧದ ನಡುವೆಯೂ ನಡೆದಿದೆ. ಸಹಸ್ರಾರು ಕಾರ್ಯಕರ್ತರು ರೋಹಿತ್ ಚಕ್ರತೀರ್ಥರನ್ನು ಸ್ವಾಗತಿಸುವ ಮೂಲಕ ವಿರೋಧಿ ಪಾಳಯಕ್ಕೆ ತಿರುಗೇಟು ನೀಡಿದ ಘಟನೆಗೆ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶ ಉತ್ಸವ ಸಾಕ್ಷಿಯಾಗಿದೆ.
ನಾರಾಯಣ ಗುರುಗಳಿಗೆ ಅವಮಾನ ಮಾಡಿದ್ದಾರೆ ಎಂಬ ವಿಚಾರ ಇಟ್ಟುಕೊಂಡು ಬಿಲ್ಲವ ಸಮುದಾಯದ ಕೆಲವರು ರೋಹಿತ್ ಚಕ್ರತೀರ್ಥರ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸಂಘ ಪರಿವಾರದಲ್ಲಿ ಅವಿರತ ಆಗ್ರಹದಿಂದ ಕ್ಷೇತ್ರಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ತೆರಳಿದ್ದಾರೆ.
0 Comments