ಮೂಡುಬಿದಿರೆ: ರಾಜ್ಯ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ 4ನೇ ಹಂತ ರೂ 1 ಕೋಟಿ ಮೊತ್ತದ ಯೋಜನೆಯಡಿ ಬಿಡುಗಡೆಯಾಗಿರುವ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಫಲಾನುಭವಿಗಳಿಗೆ ಆದೇಶಪತ್ರ ವಿತರಣಾ ಕಾರ್ಯಕ್ರಮವು ಮಂಗಳವಾರ ಸ್ಕೌಟ್ಸ್ &ಗೈಡ್ಸ್ ಕನ್ನಡ ಭವನದಲ್ಲಿ ನಡೆಯಿತು.
ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ, ಫಲಾನುಭವಿಗಳಿಗೆ ಆದೇಶಪತ್ರವನ್ನು ವಿತರಿಸಿ ಮಾತನಾಡಿ ಅತೀ ಹೆಚ್ಚು ಅನುದಾನವನ್ನು ತನ್ನ ಕ್ಷೇತ್ರಕ್ಕೆ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಅಮೃತ ನಗರೋತ್ಥಾನ ಯೋಜನೆಯಲ್ಲಿ ಪುರಸಭೆಗೆ ಈ ಹಿಂದೆ ಹನ್ನೆರಡುವರೆ ಕೋಟಿ ರೂ ಬಂದಿದ್ದು ಅದರಲ್ಲಿ ಅಭಿವೃದ್ಧಿ ಕಾಮಗಾರಿಗಳು ವೇಗದಿಂದ ನಡೆಯುತ್ತಿದ್ದಯ ಇದೀಗ ಮತ್ತೊಮ್ಮೆ ರೂ 1ಕೋ.ಅನುದಾನ ಬಿಡುಗಡೆಯಾಗಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸವನ್ನು ಮಾಡಲಾಗಿದೆ. ಈಗಾಗಲೇ ಮೂಡುಬಿದಿರೆಯಲ್ಲಿ ಸುಸಜ್ಜಿತ ಆಡಳಿತ ಸೌಧ, ಸ್ವರಾಜ್ಯ ಮೈದಾನದಿಂದ ಸಮಾಜ ಮಂದಿರದವರೆಗೆ ದ್ವಿಪಥ ರಸ್ತೆ ಮತ್ತು ಹೈಮಾಸ್ಟ್ ದೀಪಗಳ ಮೂಲಕ ಸುಂದರೀಕರಣಗೊಳಿಸಲಾಗಿದೆ. ನಾಗರಕಟ್ಟೆಯಲ್ಲಿ 2ಎಕ್ರೆ ಜಾಗದಲ್ಲಿ ರೂ 5ಕೋ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ತಾಲೂಕು ಪಂಚಾಯತ್ ಕಟ್ಟಡಕ್ಕೆ ಶಿಲಾನ್ಯಾಸ, ಕಡಲಕೆರೆ ಬಳಿ ರೂ.೬ ಕೋ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂಬೇಡ್ಕರ್ ಭವನಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ತಾಲೂಕಿಗೆ ರೂ.146 ಕೋ. ವೆಚ್ಚದಲ್ಲಿ ಕಾರ್ಯಗತಗೊಳ್ಳಲಿರುವ ನೀರಿನ ಯೋಜನೆಗೆ ಕಾಮಗಾರಿಯು ಬಿರುಸಿನಿಂದ ಸಾಗುತ್ತಿದೆ. ಪುರಸಭೆಗೆ ವ್ಯಾಪ್ತಿಗೆ 24 ಗಂಟೆಗಳ ಕಾಲ ನೀರನ್ನು ನೀಡಲು ರೂ 66 ಕೋವೆಚ್ಚದಲ್ಲಿ ಡಿಪಿಆರ್ ರೆಡಿಯಾಗಿದೆ.
ಮೂಡುಬಿದಿರೆಯಲ್ಲಿ 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಐಬಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಯುಜಿಡಿಗೆ ಜಾಗವನ್ನು ಕಾಯ್ದಿಸಲಾಗಿದೆ. ಮೂಲ್ಕಿಯಲ್ಲಿ ಆಡಳಿತ ಸೌಧ ತಲೆ ಎತ್ತಲಿದೆ. 2 ಕೋ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಐಬಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ.ಅಲ್ಲದೆ ಬಜ್ಪೆ , ಕಿನ್ನಿಗೋಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಯನ್ನು ನೀಡಲಾಗಿದೆ. ರಾಜಕೀಯ ಮಾಡದೆ ಚಚ್೯ ಮಸೀದಿಗಳ ಅಬಿವೃದ್ಧಿಗೂ ಅನುದಾನವನ್ನು ಒದಗಿಸುವ ಮೂಲಕ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡಲಾಗಿದೆ ಎಂದರು.
ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತ ಶಶಿಧರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ವಾಡ್ ೯ ಸದಸ್ಯ ರಾಜೇಶ್ ನಾಯ್ಕ್, ಮುಖ್ಯಾಧಿಕಾರಿ ಇಂದು ಎಂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎಂಜಿನಿಯರ್ ಪದ್ಮನಾಭ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.
0 Comments