*ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರ ಮಹೋತ್ಸವ 10 ದಿನ ವೈಭವದಿಂದ ಜರಗಿತು*
ಬೆಳ್ತಂಗಡಿ : ಇತಿಹಾಸ ಪ್ರಸಿದ್ದ ಬೆಳ್ತಂಗಡಿಯ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರ ಮಹೋತ್ಸವು ಪೆಬ್ರವರಿ 13 ರಿಂದ ಪೆಬ್ರವರಿ 22 ರ ತನಕ ವೈಭವದಿಂದ ಜರಗಿತು.
ಪ್ರಶ್ನಾಚಿಂತನ,ಗೊನೆ ಮುಹೂರ್ತ, ನವಕಕಲಶ,ಪ್ರಸನ್ನ ಪೂಜೆ,ಸಾಮೂಹಿಕ ನವಗ್ರಹಶಾಂತಿ,ನಾಗ ತನುತರ್ಪಣ,ಸಾಮೂಹಿಕ ಶನಿಪೂಜೆ, ವಸಂತಕಟ್ಟೆ ಪೂಜೆ, ಮಹಾರಂಗ ಪೂಜೆ, ಗಣಹೋಮ, ಶತರುದ್ರಾಭಿಷೇಕ, ಪಲ್ಲಕಿ ಉತ್ಸವ, ಚಂದ್ರಮಂಡಲೋತ್ಸವ,ಅಶ್ವಥಕಟ್ಟೆ ಪೂಜೆ, ಶ್ರೀ ಮನ್ಮಹಾರಥೋತ್ಸವ , ಶ್ರೀ ದೇವರ ಬೀದಿ ಸವಾರಿ, ಕಟ್ಟೆ ಪೂಜೆ, ಅವಭೃತ ಸ್ನಾನ , ಧರ್ಮದೈವಗಳ ನೇಮೋತ್ಸವ, ಸಹಿತ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು 10 ದಿನಗಳ ಕಾಲ ವೈಭವದಿಂದ ನಡೆಯಿತು.
ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರಾದ ಕೆಲ್ಲಗುತ್ತು ಸಬ್ರಬೈಲು ಜಯವರ್ಮರಾಜ ಬಳ್ಳಾಲ್ ಹಾಗೂ ಸಹೋದರ, ಸಹೋದರಿಯರು ಮತ್ತು ಕುಟುಂಬಸ್ಥರು, ಊರ ಹಾಗೂ ಪರ ಊರಿನ ಭಕ್ತವೃಂದವರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಿದ್ದಾರು
0 Comments