ರಾಜ್ಯದಲ್ಲಿ ಮತ್ತಷ್ಟು ಜಾತಿಗಳ ಅಭಿವೃದ್ಧಿ ನಿಗಮ ಘೋಷಿಸಿದ ಸಚಿವ ಕೋಟ: ಹಿಂದುಳಿದ ವರ್ಗಗಳಿಗೆ ಭರ್ಜರಿ ಗಿಫ್ಟ್
ಬಿಲ್ಲವ ಸಮುದಾಯಕ್ಕೆ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಿಸಿದ ಬೆನ್ನಲ್ಲೇ ಮತ್ತಷ್ಟು ಸಮುದಾಯಗಳಿಗೆ ಅಭಿವೃದ್ಧಿ ನಿಗಮವನ್ನು ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಘೋಷಿಸಿದ್ದಾರೆ.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಮೇಧಾರ, ಹಡಪದ ಹಾಗೂ ಗಾಣಿಗ ನಿಗಮಗಳ ಪ್ರಕಟನೆ ಆಗಿದೆ ಎಂದು ಸಚಿವರು ಹೇಳಿದ್ದು ಈ ಸಂಬಂಧ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇನ್ನೂ ಹಲವು ಸಮುದಾಯದ ಬೇಡಿಕೆ ಇದ್ದು ಅದೂ ಪರಿಶೀಲನೆಯಲ್ಲಿದೆ. ಹಿಂದುಳಿದ ಸಮುದಾಯಗಳನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೆಲಕ್ಕೆತ್ತುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
0 Comments