23ನೇ ವರ್ಷದ ಮೂಡುಬಿದಿರೆ ಕಂಬಳ ಫಲಿತಾಂಶ,

ಜಾಹೀರಾತು/Advertisment
ಜಾಹೀರಾತು/Advertisment
23ನೇ ವರ್ಷದ ಮೂಡುಬಿದಿರೆ ಕಂಬಳ ಫಲಿತಾಂಶ, 
*236 ಜತೆ ಕೋಣಗಳು ಭಾಗಿ, 36 ಗಂಟೆಯಲ್ಲಿ ಮುಗಿದ ಕಂಬಳ
ಮೂಡುಬಿದಿರೆ : ಇಲ್ಲಿನ ಒಂಟಿಕಟ್ಟೆ ಕಡಲಕೆರೆ ನಿಸಗ೯ಧಾಮದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಅವರ ನೇತೃತ್ವದಲ್ಲಿ ನಡೆದ ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ ಒಟ್ಟು 236 ಕೋಣಗಳು ಭಾಗವಹಿಸುವ ಮೂಲಕ 36 ಗಂಟೆಗಳ ಕಾಲ ಯಶಸ್ವಿಯಾಗಿ ಮೂಡಿ ಬಂತು. 

ಕನೆಹಲಗೆ ವಿಭಾಗದಲ್ಲಿ 11 ಜೊತೆ, ಅಡ್ಡಹಲಗೆ ವಿಭಾಗದಲ್ಲಿ 09 ಜೊತೆ, 
ಹಗ್ಗ ಹಿರಿಯ ವಿಭಾಗದಲ್ಲಿ 19 ಜೊತೆ, 
ನೇಗಿಲು ಹಿರಿಯ ವಿಭಾಗದಲ್ಲಿ 36 ಜೊತೆ,  
ಹಗ್ಗ ಕಿರಿಯ ವಿಭಾಗದಲ್ಲಿ 39 ಜೊತೆ,
ನೇಗಿಲು ಕಿರಿಯ ವಿಭಾಗದಲ್ಲಿ 122 ಜೊತೆ ಹೀಗೆ
ಒಟ್ಟು 236 ಜೊತೆ ಕೋಣಗಳು ಭಾಗವಹಿಸಿದ್ದವು.

ಅಡ್ಡ ಹಲಗೆ ವಿಭಾಗದಲ್ಲಿ

 ನಾರ್ಯ ಗುತ್ತು ಕುವೆತ್ತಬೈಲು ಸಂತೋಷ್ ರೈ ಬೊಳ್ಯಾರು - ಪ್ರಥಮ (12.33)
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ.

 ಇರುವೈಲು ದೊಡ್ಡಗುತ್ತು ಜಗದೀಶ್ ಎಂ ಶೆಟ್ಟಿ -ದ್ವಿತೀಯ(12.64)
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಹಗ್ಗ ಹಿರಿಯ ವಿಭಾಗದಲ್ಲಿ: 
ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ -ಪ್ರಥಮ (11.45)
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

 ಅತ್ತೂರು ಮನ್ಮಥ ಜೆ ಶೆಟ್ಟಿ "ಬಿ" ದ್ವಿತೀಯ (12.02)
ಓಡಿಸಿದವರು: ನತೀಶ್ ಬಾರಾಡಿ.

ಹಗ್ಗ ಕಿರಿಯ ವಿಭಾಗದಲ್ಲಿ: 

 ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ "ಬಿ"- ಪ್ರಥಮ (11.72)
ಓಡಿಸಿದವರು: ಕಾವೂರು ದೋಟ ಸುದರ್ಶನ್

 ಉಡುಪಿ ಕಕ್ಕುಂಜೆ ರಾಧ ನಿಲಯ ಸಂತೋಷ್ ಶಿವರಾಜ್ ಪೂಜಾರಿ "ಬಿ"- ದ್ವಿತೀಯ(12.02)
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ.

ನೇಗಿಲು ಹಿರಿಯ ವಿಭಾಗದಲ್ಲಿ

 ತೊಡಾರು ಪಂಚಶಕ್ತಿ ಬಾರ್ದಿಲ ಶ್ಲೋಕ್ ರಂಜಿತ್ ಪೂಜಾರಿ -ಪ್ರಥಮ(12.10)
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

 ನೂಜಿಪ್ಪಾಡಿ ಡಾ.ಪ್ರವೀಣ್ ಹೊಳ್ಳ - ದ್ವಿತೀಯ(12.13)
ಓಡಿಸಿದವರು: ನಕ್ರೆ ಪವನ್ ಮಡಿವಾಳ.

ನೇಗಿಲು ಕಿರಿಯ ವಿಭಾಗದಲ್ಲಿ 
 ಮಿಯಾರ್ ಬೋರ್ಕಟ್ಟೆ ಮಿತ್ತೊಟ್ಟು ಪೃಥ್ವಿ ಪ್ರಾಪ್ತಿ ಸಂಧ್ಯಾ ಪ್ರಭಾಕರ ಶೆಟ್ಟಿ "ಎ"- ಪ್ರಥಮ (11.22)
ಓಡಿಸಿದವರು: ಪಡು ಸಾಂತೂರು ಪೃಥ್ವಿರಾಜ್.
 ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ "ಎ" -ದ್ವಿತೀಯ(11.46)
ಓಡಿಸಿದವರು: ಕುಂದ ಬಾರಂದಾಡಿ ಮಾಸ್ತಿಕಟ್ಟೆ ಸ್ವರೂಪ್. 

ಸಮಾರೋಪ : ಸಹಾಯಕ ವಲಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಉಮಾನಾಥ ಎ. ಕೋಟ್ಯಾನ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೆಸ್ಕಾಂನ ಸಹಾಯಕ ಕಾಯ೯ನಿವಾ೯ಹಕ ಅಭಿಯಂತರ ಮೋಹನ್, ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ, ವಕೀಲ ಶರತ್ ಶೆಟ್ಟಿ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.
  ಕಂಬಳ ಸಮಿತಿಯ ಪ್ರಮುಖರಾದ ರಂಜಿತ್ ಪೂಜಾರಿ, ಕೊಳಕೆ ಇವ೯ತ್ತೂರು ಭಾಸ್ಕರ್ ಎಸ್. ಕೋಟ್ಯಾನ್, ವಿಜಯ ಕುಮಾರ್ ಕಂಗಿನಮನೆ, ಸುರೇಶ್ ಕೆ. ಪೂಜಾರಿ, ದಿನೇಶ್ ಪುತ್ರನ್, ಹರಿಪ್ರಸಾದ್, ಶಾಂತಿಪ್ರಸಾದ್ ಹೆಗ್ಡೆ, ಸುನಿಲ್ ಆಳ್ವ, ಲಕ್ಷ್ಮಣ್ ಪೂಜಾರಿ,ಸುರೇಶ್ ಶೆಟ್ಟಿ ದೋಟ, ನಾಗೇಶ್ ಇರುವೈಲು, ದಿನೇಶ್ ಪೂಜಾರಿ ಮತ್ತಿತರರು ಈ ಸಂದಭ೯ದಲ್ಲಿದ್ದರು.

Post a Comment

0 Comments