ಅಳಿಯೂರಿನಲ್ಲಿ ಉಚಿತ ಆರೋಗ್ಯ ಶಿಬಿರ
ಮೂಡುಬಿದಿರೆ: ಮಂಗಳೂರು ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಸಹಯೋಗದಲ್ಲಿ ಅಳಿಯೂರಿನ ಹೇಮಾ ಸಭಾಭವನದಲ್ಲಿ ನಡೆದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಮಿಥುನ್ ರೈ ಸಹೋದರ ಖ್ಯಾತ ಹೃದಯ ತಜ್ಞ ಡಾ| ಮನೀಷ್ ರೈ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಪ್ರಸ್ತುತ್ತ ಹೃದಯಾಘಾತಗಳಾಗಿ ಮೃತಪಟ್ಟಿರುವವರ ಅಂಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೆಚ್ಚು ಯುವಜನರು ಹೆಚ್ಚು ಹೃದಯಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಸಾಮಾನ್ಯ ಜನರು ತಮಗೆ ಯಾವುದೇ ಕಾಯಿಲೆಗಳಲ್ಲವೆಂದೇ ಆರೋಗ್ಯದ ಬಗ್ಗೆ ನಿರ್ಲಕ್ಷö್ಯವನ್ನು ತೋರದೇ ಮುಂಚಿತವಾಗಿಯೇ ಆರೋಗ್ಯ ತಪಾಸಣೆಯನ್ನು ನಡೆಸಿ, ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಿ ಎಂದು ಸಲಹೆ ನೀಡಿದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಹಳ್ಳಿಯ ಜನರಿಗೆ ಮಂಗಳೂರುವರೆಗೆ ತೆರಳಿ ಆರೋಗ್ಯ ತಪಾಸಣೆಯನ್ನು ನಡೆಸಲು ಕಷ್ಟವಾಗುತ್ತದೆಂಬ ಉದ್ದೇಶದಿಂದ ಮಿಥುನ್ ರೈ ನೇತೃತ್ವದಲ್ಲಿ ಅವರ ಸಹೋದರ ಮನೀಶ್ ರೈ ಉಪಸ್ಥಿತಿಯಲ್ಲಿ ಕೆ.ಎಂ.ಸಿ ಆಸ್ಪತ್ರೆಯ ವೈದ್ಯರುಗಳನ್ನು ಕರೆಸಿ ಸಾಮಾನ್ಯ ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂಬ ನಿಟ್ಟಿನಲ್ಲಿ ಆಯೋಜಿಸಲಾಗಿದ್ದು, ಜನರು ಆರೋಗ್ಯದ ಬಗ್ಗೆ ಅಸಡ್ಡೆಯನ್ನು ತೋರದೇ ತಪಾಸಣೆ ನಡೆಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ಶಿಬಿರದ ನೇತೃತ್ವವನ್ನು ವಹಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, ಜನಸಾಮಾನ್ಯರು ಪ್ರಾಥಮಿಕ ಆರೋಗ್ಯ ತಪಾಸಣೆಯನ್ನು ಹೆಚ್ಚಿನ ಜನರು ಮಾಡಿಸಿರುವುದಿಲ್ಲ. ಶುಗರ್, ಬಿ.ಪಿ, ಕೊಲೆಸ್ಟ್ರಾಲ್ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಲಿ ಅಥವಾ ಇನ್ನೀತರ ಸಾಮಾನ್ಯ ತೊಂದರೆಗಳಿದ್ದರೆ ಅವುಗಳನ್ನೆಲ್ಲಾ ತಪಾಸಣೆ ನಡೆಸಿ ಸೂಕ್ತ ಪರಿಹಾರಗಳನ್ನು ಪಡೆದು ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಿ ಎಂದು ಸಲಹೆಯಿತ್ತರು.
0 Comments