ಕಲ್ಲಮುಂಡ್ಕೂರು ತಹಸೀಲ್ದಾರ್ ಗ್ರಾಮ ವಾಸ್ತವ್ಯ
ವಿಕ ಸುದ್ದಿಲೋಕ ಮೂಡುಬಿದಿರೆ: ತಹಸೀಲ್ದಾರರ ಗ್ರಾಮ ವಾಸ್ತವ್ಯಕಾರ್ಯಕ್ರಮದಡಿ ಮೂಡುಬಿದಿರೆ ತಹಸೀಲ್ದಾರ್ ಸಚ್ಚಿದಾನಂದ ಸತ್ಯಪ್ಪಕುಚನೂರುಕಲ್ಲಮುಂಡ್ಕೂರುಗ್ರಾಮ ಪಂಚಾಯತ್‌ನಲ್ಲಿ ಶುಕ್ರವಾರಗ್ರಾಮ ವಾಸ್ತವ್ಯ ನಡೆಸಿ ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಿ ಮನವಿ ಪತ್ರಗಳನ್ನು ಸ್ವೀಕರಿಸಿದರು. ಕಂದಾಯ, ಕೃಷಿ, ಸರ್ವೆ, ಗ್ರಾಮ ಪಂಚಾಯತ್‌ಗೆ ಸಂಬಂಧಿಸಿದ 8ಅರ್ಜಿಗಳನ್ನು ಸ್ವೀಕರಿಸಲಾಯಿತು. ನ್ಯಾಯಬೆಲೆಅಂಗಡಿಗೆ ಭೇಟಿ ನೀಡಿಆಹಾರ ಪದಾರ್ಥಗಳ ಸಮರ್ಪಕ ವಿತರಣೆಯಕುರಿತು ಪರಿಶೀಲನೆ ನಡೆಸಲಾಯಿತು.
ಇಬ್ಬರು ಫಲಾನುಭವಿಗಳ ಸ್ಥಳಕ್ಕೆ ತೆರಳಿ ಸಮಸ್ಯೆಯನ್ನು ಆಲಿಸಲಾಯಿತು. ಹಾಗೂ ಈ ಫಲಾನುಭವಿಗಳಿಗೆ ಜ ೨೫ ರಂದು ಪುತ್ತಿಗೆಯಲ್ಲಿ ನಡೆಯುವಜನಸ್ಪಂದನೆ ಸಭೆಯಲ್ಲಿ ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿದರು.
ಪಂಚಾಯತ್‌ಅಧ್ಯಕ್ಷ ಕೇಶವ ಪೂಜಾರಿ, ಉಪಾಧ್ಯಕ್ಷೆಕಲ್ಯಾಣಿ,ಡೆಪ್ಯುಟಿ ತಹಸೀಲ್ದಾರ್‌ಗಳಾದ ಬಾಲಚಂದ್ರ, ತಿಲಕ್‌ರಾಜ್, ಉಪಸ್ಥಿತರಿದ್ದರು. ಅರಣ್ಯ, ಲೋಕೋಪಯೋಗಿ, ಆರೋಗ್ಯ, ಅಬಕಾರಿ, ಮೆಸ್ಕಾಂ, ಸರ್ವೆ ಅಧಿಕಾರಿಗಳು ಪಾಲ್ಗೊಂಡರು.
0 Comments