ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)ದ ಆವರಣದಲ್ಲಿ ಡಿಸೆಂಬರ್ 21ರಿಂದ 27ರ ವರೆಗೆ ನಡೆಯಲಿರುವ 'ಅಂತಾರಾಷ್ಟ್ರೀಯ ಸೈಟ್ಸ್ ಗೈಡ್ ಸಾಂಸ್ಕೃತಿಕ, ಜಾಂಬೂರಿ'ಯಲ್ಲಿ ಅಭೂತಪೂರ್ವ 'ಕೃಷಿಮೇಳ"ವಿಶೇಷವಾಗಿ ಆಯೋಜಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಸ್ಕೌಟ್ ಗೈಡ್ಸ್ ನ ಜಿಲ್ಲಾ ಆಯುಕ್ತ ಡಾ.ಎಂ.ಮೋಹನ ಆಳ್ವ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೃಷಿಮೇಳಕ್ಕಾಗಿ ಮುಂಡುರ್ದೆಗುತ್ತು ಕೆ.ಅಮರನಾಥ ಶೆಟ್ಟಿ ಆವರಣದಲ್ಲಿ 12 ಎಕರೆ ಜಾಗವನ್ನು ಮೀಸಲಿರಿಸಿದ್ದು, ಇದರಲ್ಲಿ 4 ಎಕರೆ ಜಾಗದಲ್ಲಿ 100 ವಿಧ ತರಕಾರಿಗಳ ಅತ್ಯಾಕರ್ಷಕ ನೈಜತೋಟ ಮೈತಳೆದಿದೆ. ಇದರೊಂದಿಗೆ ಚಿತ್ತಾಕರ್ಷಕವಾದ ಫಲ ಮತ್ತು ಮುಪ್ಪ ಪ್ರದರ್ಶನಗಳು ಆವರಣದ ಸೊಬಗನ್ನು ಹೆಚ್ಚಿಸಲಿದ್ದು ನೋಡುಗರ ಮೈನವಿರೇಳಿಸುವಂತೆ ರೂಪಗೊಳ್ಳುತ್ತಿದೆ. ದೇಶ-ವಿದೇಶಗಳ ಬಾಳೆ, ತೆಂಗು, ಧಾನ್ಯ, 530) ವಿಧ ಭತ್ತ, ವಿವಿಧ ರೀತಿಯ ಗೆಡ್ಡೆಗೆಣಸುಗಳು, ಆಯುರ್ವೇದಿಕ್ ಹಣ್ಣು ಹಂಪಲುಗಳು, 8 ವಿವಿಧ ಲೆಟ್ಯೂಸ್ ಮತ್ತು ಬ್ರುಕೋಲಿ ಪ್ರದರ್ಶನಗಳು ಈ 'ಕೃಷಿಮೇಳ"ವು ವೈಭವಕ್ಕೆ ಸಾಕ್ಷಿಯಾಗಲಿವೆ.
ವಿಜ್ಞಾನ ವಸ್ತು ಪ್ರದರ್ಶನಗಳ ವಿಜ್ಞಾನಮೇಳ, ವಿವಿಧ ಭಾಷೆಗಳ ಪುಸ್ತಕ ಮೇಳ, ಕಲಾವಿದರ ಕೈಚಳಕದ ಕಲಾಮೇಳ, ವಿವಿಧ ತಿಂಡಿತಿನಸುಗಳ ಆಹಾರೋತ್ಸವ ಮೇಳಗಳು ಈ ಉತ್ಸವದಲ್ಲಿ ನೋಡುಗರನ್ನು ನಿಬ್ಬೆರಗಾಗಿಸುವಂತೆ ಆಯೋಜನೆಗೊಳ್ಳುತ್ತಿವೆ. 6 ವೇದಿಕೆಗಳಲ್ಲಿ ವೈವಿಧ್ಯಮಯ ಭಾರತೀಯ ಸಂಸ್ಕೃತಿಯನ್ನು ಅನಾವರಣಗೊಳಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿದ್ದು, ಕೃಷಿಮೇಳದಲ್ಲಿ 'ಎ.ಜಿ.ಕೊಡ್ಡಿ' ವೇದಿಕೆಯು ತೆರೆದುಕೊಳ್ಳಲಿದೆ. ಸಭಾಕಾರ್ಯಕ್ರಮ ಮತ್ತು ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ನಡೆಯಲಿದ್ದು ಇವೆಲ್ಲವೂ ಮುಕ್ತವಾಗಿ ಮತ್ತು ಉಚಿತವಾಗಿ ಸಂದರ್ಶನಕ್ಕೆ ತೆರೆದುಕೊಳ್ಳಲಿದ್ದು ಪ್ರೇಕ್ಷಕರ ಬುದ್ಧಿ-ಭಾವಗಳ ವಿಕಾಸಕ್ಕೆ ರಹದಾರಿ ಒದಗಿಸಲಿವೆ. ಮಧ್ಯಾಹ್ನ-ರಾತ್ರಿಗಳ ವಿಶೇಷ ಊಟೋಪಚಾರಗಳು ಉಚಿತವಾಗಿದ್ದು, ಸಂದರ್ಶಕರ ಹಸಿವು-ಬಾಯಾರಿಕೆಗಳನ್ನು ಯಥೇಚ್ಛ ನೀಗಲಿವೆ.
ಇದರೊಂದಿಗೆ ತರಹೇವಾರಿ ಮಾರಾಟ ಮಳಿಗೆಗಳು ಮೈದೋರಲಿದ್ದು ಒಂದೇ ಕಡೆ ಎಲ್ಲಾ ವಸ್ತುಗಳೂ ದೊರೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಮಕ್ಕಳಾದಿಯಾಗಿ ವಯೋವೃದ್ಧರವರೆಗೆ ಅವರವರ ಅಗತ್ಯದ ವಸ್ತುಗಳನ್ನು ಆಯುವ, ಕೊಳ್ಳುವ ಅವಕಾಶ ಇಲ್ಲಿದೆ.
ಕೃಷಿಸಿರಿಯಲ್ಲಿ ಕೃಷಿಗೆ ಸಂಬಂಧಿಸಿದ ಮಾರಾಟ ಮಳಿಗೆಗಳನ್ನಿಡಲು ಅವಕಾಶವಿದ್ದು ಕೃಷಿ ಸಂಬಂಧಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ನೀಡಲಾಗಿದೆ. 100 ಚದರ ಅಡಿ (JOXIO) ಕೃಷಿ ಮಳಿಗೆಗೆ 7 ದಿನಕ್ಕೆ ರೂ. 6000/- ಶುಲ್ಕ ನಿಗದಿ ಮಾಡಲಾಗಿದೆ. ಒಬ್ಬರು ಒಂದಕ್ಕಿಂತ ಹೆಚ್ಚು ಮಳಿಗೆಗಳನ್ನು ಪಡೆಯಲು ಅವಕಾಶವಿದೆ. ವಸ್ತು ಮಾರಾಟವಿಲ್ಲದ ಕೇವಲ ಪ್ರದರ್ಶನ ಮಳಿಗೆಗಳಿಗೆ ಯಾವುದೇ ಶುಲ್ಕವಿಲ್ಲ. ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಮತ್ತು ಕೃಷಿವಿಶ್ವವಿದ್ಯಾನಿಲಯಗಳಿಗೆ ಮಳಿಗೆಗಳು ಉಚಿತವಾಗಿ ದೊರೆಯಲಿದೆ. ಆಸಕ್ತರು ಕೈಬರಹದ ಅರ್ಜಿಯೊಂದಿಗೆ ನಗದು/ಡಿ.ಡಿಯನ್ನು INTERNATIONAL CULTURAL
SCOUTS AND GUIDES JAMBOREE ಹೆಸರಿನಲ್ಲಿ ಖರೀದಿಸಿ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡುವುದು ಅಥವಾ ಆಳ್ವಾಸ್ ದಾಖಲಾತಿ ವಿಭಾಗಕ್ಕೆ ಖುದ್ದಾಗಿ ಭೇಟಿ ನೀಡಿ ನೋಂದಾಯಿಸುವುದು ದಿನಾಂಕ 18.12.2022 ಆಸಕ್ತರು ಸೋಂದಾಯಿಸಿಕೊಳ್ಳಲಾಗಿದೆ.ಆನಂತರ ನೋಂದಣಿಗೆ ಅವಕಾಶವಿಲ್ಲ.
ವೈಭವೋಪೇತವೂ, ಅತ್ಯಾಕರ್ಷಕವೂ, ಆಪೂರ್ವವೂ ಆಗಿರುವ 'ಅಂತಾರಾಷ್ಟ್ರೀಯ ಸೈಟ್ಸ್ ಡ್ ಸಾಂಸ್ಕೃತಿಕ ಜಾಂಬೂರಿಗೆ ಜಾತ್ರೆಯ ಕಳೆಯದ್ದು ದಿನವೊಂದಕ್ಕೆ 1 ಲಕ್ಷವನ್ನು ಮೀರಿ ಜನರು ಆಗಮಿಸಬಹುದೆಂದು ನಿರೀಕ್ಷಿಸಲಾಗಿದೆ. ನಾಡಿನ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದರು.
ROZEF Rod: 08258-261229. 08258-238104. ಸಂಪರ್ಕ ವಿಳಾಸ: ಆಳ್ವಾಸ್ ಕೃಷಿಸಿರಿ ವಿಭಾಗ,ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)
ಪ್ರಗತಿಪರ ಕೃಷಿಕರಾದ ರಾಜವರ್ಮ ಬೈಲಂಗಡಿ, ಸುಭಾಶ್ಚಂದ್ರ ಚೌಟ, ಧನಕೀರ್ತಿ ಬಲಿಪ ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
0 Comments