ಮೂಡಬಿದಿರೆ : ಪವಿತ್ರಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಹೊರಟಿರುವ ಜಾರ್ಖಂಡ್ ಸರಕಾರದ ಆದೇಶವನ್ನು ಹಿಂಪಡೆಯುವಂತೆ ಮನವಿ

ಜಾಹೀರಾತು/Advertisment
ಜಾಹೀರಾತು/Advertisment

 ಜೈನಕಾಶಿ ಮೂಡಬಿದಿರೆ :

 


ಜೈನ ಧರ್ಮದ   ಪವಿತ್ರ  ಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ  ತಾಣವನ್ನಾಗಿ ಮಾಡಲು ಹೊರಟಿರುವ ಜಾರ್ಖಂಡ್ ಸರಕಾರದ ಆದೇಶವನ್ನು ಹಿಂಪಡೆಯುವಂತೆ   ಮೂಡುಬಿದಿರೆ   ಜೈನ ಮಠದ  ಪರಮ ಪೂಜ್ಯ ಚಾರುಕೀರ್ತಿ ಭಟ್ಟಾರಕ  ಸ್ವಾಮೀಜಿಯವರ ಆಶೀರ್ವಾದದೊಂದಿಗೆ   ಮೂಡುಬಿದಿರೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೈನ ಧರ್ಮ ದ  ಸಂಘ ಸಂಸ್ಥೆಗಳಾದ  *ಜೈನ್ ಮಿಲನ್*,  *ಮಹಾವೀರ ಸಂಘ*,  *ಸರ್ವ ಮಂಗಳ ಜೈನ ಮಹಿಳಾ ಸಂಘ*  *ತೌಳವ ಇಂದ್ರ ಸಮಾಜ*, *ತ್ರಿಭುವನ್ ಯೂತ್ ಫ್ರೆಂಡ* , *ಬಸದಿಗಳ ಸ್ವಚ್ಛತಾ ತಂಡ* ಗಳ ಅಧ್ಯಕ್ಷರು ಗಳು , ಕಾರ್ಯದರ್ಶಿಗಳು , ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಮೂಡುಬಿದ್ರೆಯ ತಹಶೀಲ್ದಾರರ ಮೂಲಕ ಗೌರವಾನ್ವಿತ   ರಾಷ್ಟ್ರಪತಿಗಳಿಗೆ,   ಸನ್ಮಾನ್ಯ ಪ್ರಧಾನ ಮಂತ್ರಿಗಳಿಗೆ, ಸನ್ಮಾನ್ಯ ಗೃಹ ಮಂತ್ರಿಗಳಿಗೆ, ಜಾರ್ಖಂಡ್ ಸರಕಾರದ ಮುಖ್ಯಮಂತ್ರಿಗಳಿಗೆ, ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಿಗೆ ಮನವಿಪತ್ರಗಳನ್ನು   ಸಲ್ಲಿಸಿದರು.

Post a Comment

0 Comments