ಪಣಪಿಲದಲ್ಲಿ ತಹಶೀಲ್ದಾರ್ "ಗ್ರಾಮ ವಾಸ್ತವ್ಯ"-2 ಕಿ.ಮೀ ನಡೆದು ಸಮಸ್ಯೆ ಆಲಿಸಿದ ಮೂಡುಬಿದಿರೆ ತಹಶೀಲ್ದಾರ್

ಜಾಹೀರಾತು/Advertisment
ಜಾಹೀರಾತು/Advertisment


ಮೂಡುಬಿದಿರೆ: ದರೆಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಪಿಲದಲ್ಲಿ ಶನಿವಾರ ನಡೆದ ತಹಶೀಲ್ದಾರ್ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶ ವಾದ ಓಂಟೆದಕಜೆ (ಮೂಜಿಮಲೆ) ಕಾಡುಪ್ರದೇಶದಲ್ಲಿರುವ ಮೂರು ಮನೆಗಳಿಗೆ  ತಾಲೂಕು ತಹಶೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.

ಸಂರಕ್ಷಿತ ಅರಣ್ಯ ಪ್ರದೇಶವಾಗಿರುವ ಓಂಟೆದಕಜೆಯಲ್ಲಿ  ಅಣ್ಣಿ ಗೌಡ, ಸಂಜೀವ ಗೌಡ ಹಾಗೂ ನಾರಾಯಣ ಗೌಡ ಅವರ ಮೂರು ಕುಟುಂಬಗಳು ಇಲ್ಲಿ ಕಳೆದ ಕೆಲವು ವರ್ಷಗಳಿಂದ ಮನೆಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಿಗೆ  ರಸ್ತೆ ಬದಿಯಿಂದ ತಮ್ಮ ಮನೆಗೆ ತಲುಪಲು ಸರಿಯಾದ ರಸ್ತೆ ಸಂಪರ್ಕವಿಲ್ಲದಿರುವುದರಿಂದ ಅರಣ್ಯ ಪ್ರದೇಶದಲ್ಲಿಯೇ 2 ಕಿ.ಮೀ ನಷ್ಟು ದೂರ ನಡೆದುಕೊಂಡೇ ಸಾಗಬೇಕಾಗಿದೆ. ಈ ಬಗ್ಗೆ ಸಮಸ್ಯೆಯ ಬಗ್ಗೆ ಆಲಿಸಿದ ತಹಶೀಲ್ದಾರ್ ಅವರು 2 ಕಿ.ಮೀನಷ್ಟು ದೂರದ ಕಾಡಿನ ಮಧ್ಯೆಯೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದುಕೊಂಡೇ ಸಾಗಿ ಮೂರು ಕುಟುಂಬದ ಸದಸ್ಯರುಗಳ ಮನೆಗಳಿಗೆ ಭೇಟಿ ನೀಡಿದರು. 

  ಸಂರಕ್ಷಿತ ಅರಣ್ಯ ಪ್ರದೇಶವಾಗಿರುವುದರಿಂದ ಇಲ್ಲಿ ರಸ್ತೆ ಮಾಡಲು ಸಮಸ್ಯೆಯಾಗಿದೆ ಎಂದರು.

 ದರೆಗುಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷೆ ತುಳಸಿ,ಉಪಾಧ್ಯಕ್ಷ ಅಶೋಕ್ ಶೆಟ್ಟಿ,ಸದಸ್ಯರಾದ ಮುನಿರಾಜ್ ಹೆಗ್ಡೆ, ಜನಿತಾ,ದೀಕ್ಷಿತ್ ಪಣಪಿಲ, ಕಾರ್ಯದರ್ಶಿ ಸತ್ಯಭಾಮ, ಗ್ರಾಮಕರಣಿಕ ಕಿಶೋರ್ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.

Post a Comment

0 Comments