ಕಳವುಗೊಂಡ ಮೌಲ್ಯಯುತ ಸೊತ್ತುಗಳು ಮರಳಿ ಮಾಲೀಕರ ವಶ-ಮೂಡುಬಿದಿರೆ ಪೊಲೀಸರ ಕಾರ್ಯಾಚರಣೆಗೆ ಶ್ಲಾಘನೆ

ಜಾಹೀರಾತು/Advertisment
ಜಾಹೀರಾತು/Advertisment

 ಕಳವುಗೊಂಡ ಮೌಲ್ಯಯುತ ಸೊತ್ತುಗಳು ಮರಳಿ ಮಾಲೀಕರ ವಶ-ಮೂಡುಬಿದಿರೆ ಪೊಲೀಸರ ಕಾರ್ಯಾಚರಣೆಗೆ ಶ್ಲಾಘನೆ




ಮೂಡುಬಿದಿರೆ:ಜಿ.ಕೆ ಡೆಕೋರೆಟರ್ಸ್ ನಿಂದ   ನ.25ರಂದು ಮೌಲ್ಯಯುತವಾದ ಸೊತ್ತುಗಳು, ಕಳುವಾಗಿದ್ದು, ಕಳವು ಮಾಡಿದ ಅಪರಾಧಿಗಳನ್ನು ಮೂಡುಬಿದಿರೆ ಪೊಲೀಸರು ಬಂಧಿಸಿ, ಸೊತ್ತುಗಳನ್ನು ಜಿ.ಕೆ ಡೆಕೋರೆಟರ್ಸ್ ನ ಮಾಲಕರಿಗೆ ಹಿಂತಿರುಗಿಸಿದ್ದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಕೆ.ಬಾಬು ವಿಟ್ಲ ಹಾಗೂ ಸರ್ವ ಸದಸ್ಯರು ಮೂಡುಬಿದಿರೆ ಪೊಲೀಸರನ್ನು ಶ್ಲಾಘಿಸಿ ಅಭಿನಂದನೆಯನ್ನು ತಿಳಿಸಿದ್ದಾರೆ.

ಜಿ.ಕೆ ಡೆಕೋರೆಟರ್ಸ್ ಇವರ ಗೋಡನ್ ನಿಂದ ಸುಮಾರು ಹತ್ತು ಲಕ್ಷ ಮೌಲ್ಯದ ಸಾಮಾಗ್ರಿ ಕಳವಾಗಿದ್ದು ಈ ಬಗ್ಗೆ ಪೊಲೀಸ್ ಠಾಣೆ ಗೆ ದೂರು ನೀಡಿ ವಿಚಾರಿಸಿದಾಗ ಬಜ್ಪೆಯ ಸ್ಟಾರ್ ಸೌಂಡ್ಸ್ ಎಂಬ ಸೌಂಡ್ಸ್ ವ್ಯವಹಾರಕ್ಕೆ ಸಂಬಂದಿಸಿದ ಮಾಲಕ ಮತ್ತು ಕೆಲಸಗಾರರು ಸೇರಿಕೊಂಡು ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ.. ಈ ಬಗ್ಗೆ ಸುದ್ದಿ ತಿಳಿದ ತಕ್ಷಣ ಮೂಡಬಿದಿರೆ ಘಟಕದವರೊಂದಿಗೆ ಮಾಹಿತಿ ಪಡೆದು ಜಿಲ್ಲಾಧ್ಯಕ್ಷರ ಉಪಸ್ಥಿತಿಯಲ್ಲಿ ಜಿಲ್ಲೆಯ ಪದಾಧಿಕಾರಿಗಳು ಮತ್ತುಎಲ್ಲಾ ಘಟಕಗಳ ಸದಸ್ಯರು ಸೇರಿ ಮೂಡಬಿದಿರೆ ಠಾಣಾಧಿಕಾರಿಯವರಿಗೆ ಈ ಘಟನೆಯ ಬಗ್ಗೆ ಹೆಚ್ಚಿನ ಗಮನ ಹರಿಸಿ ಯಾವುದೇ ಒತ್ತಡಕ್ಕೆ ಒಳಗಾಗದೆ ಅಪರಾಧಿಗೆ ಸೂಕ್ತ ಶಿಕ್ಷೆಯಾಗುವ ಕ್ರಮ ವಹಿಸಿ ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಸಮಾಜಕ್ಕೆ ಸಂದೇಶ ರವಾನಿಸುವಂತೆ ಮನವಿ ನೀಡಲಾಯಿತು.

Post a Comment

0 Comments