ಮೂಡುಬಿದಿರೆ: ನಿನ್ನೆ ರಾತ್ರಿ ಕಾರ್ಕಳ ದ ಕರಿಯ ಕಲ್ಲು ಎಂಬಲ್ಲಿ ಆಟೋ ರಿಕ್ಷಾ ಮತ್ತು ಬೈಕ್ ಡಿಕ್ಕಿಯಾಗಿ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ್ದ ಆಟೋ ಚಾಲಕ ನಿನ್ನೆ ರಾತ್ರಿ ಸುರತ್ಕಲ್ ನ ಖಾಸಗಿ ಆಸ್ಪತ್ರೆ ಯಲ್ಲಿ ಸಾವನ್ನಪ್ಪಿದ್ದಾರೆ.
ಮೂಡುಬಿದಿರೆ ತಾಲೂಕಿನ ಬೆಳ್ವಾಯಿಯ ಕುಕ್ಕುಡೇಲು ನಿವಾಸಿ ವಿಜಯ ಶೆಟ್ಟಿ (57 ವರ್ಷ )ಸಾವನ್ನಪ್ಪಿದ ವ್ಯಕ್ತಿ.
ವಿಜಯ ಶೆಟ್ಟಿಯವರು ತನ್ನ ಆಟೋ ರಿಕ್ಷಾದಲ್ಲಿ ಬಜಗೋಳಿಯಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮಗುವಿನ ನಾಮಕರಣ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಕರಿಯ ಕಲ್ಲು ಎಂಬಲ್ಲಿ ಆಟೋ ರಿಕ್ಷಾ ಕ್ಕೆ ಅಡ್ಡವಾಗಿ ಬಂದ ಬೈಕ್ ಗೆ ಡಿಕ್ಕಿ ಹೊಡೆದಾಗ ಆಟೋ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಆಟೋದಲ್ಲಿ ವಿಜಯ ಶೆಟ್ಟಿಯವರ ಅಣ್ಣನ ಮಗಳು, ಮೂಡುಬಿದಿರೆ ಪುರಸಭೆಯ ಸದಸ್ಯೆ ಸೌಮ್ಯ ಶೆಟ್ಟಿ ಮತ್ತು ಆಕೆಯ ಪುತ್ರ ಹಾಗೂ ವಿಜಯ ಶೆಟ್ಟಿಯವರ ಪುತ್ರಿ ಇದ್ದಾರೆನ್ನಲಾಗಿದ್ದು ಇವರಿಗೆ ತರಚು ಗಾಯಗಳಾಗಿತ್ತು.
ಗಾಯಗೊಂಡಿದ್ದ ವಿಜಯ ಶೆಟ್ಟಿಯವರನ್ನು ಮೊದಲಿಗೆ ಕಾರ್ಕಳ ದ ಖಾಸಗಿ ಆಸ್ಪತ್ರೆ ಗೆ ದಾಖಲಿಸಿದ್ದು ಅಲ್ಲಿ ಅವರಿಗೆ ಎದೆ ನೋವು ಕಂಡು ಬಂದ ಹಿನ್ನೆಲೆಯಲ್ಲಿ ಮುಕ್ಕ ಆಸ್ಪತ್ರೆ ಗೆ ದಾಖಲಿಸಲು ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ದಾರಿ ಮಧ್ಯೆಯಲ್ಲಿ ಸಾವನ್ನಪ್ಪಿದ್ದಾರೆನ್ನಲಾಗಿದೆ
0 Comments