ಮೂಡುಬಿದಿರೆ ತಾಲೂಕು ಬೃಹತ್ ಆಗಿ ಅಭಿವೃದ್ಧಿಗೊಳ್ಳುತ್ತಿದ್ದು ವಾಹನ ದಟ್ಟಣೆಯು ಹೆಚ್ಚುತ್ತಿದೆ ಇದರಿಂದಾಗಿ
ಟ್ರಾಫಿಕ್ ಸಮಸ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೊರೋನಾ ಬಂದು ಹೋದ ಮೇಲೆಯಂತೂ ಪ್ರತಿಯೊಬ್ಬರೂ ಸ್ವಂತ ವಾಹನವನ್ನು ಹೊಂದಿಕೊಂಡಿದ್ದು, ಬಸ್ಸುಗಳ ಮೇಲೆ ಅವಲಂಬಿತರಾಗಿರುವುದು ಕಡಿಮೆಯಾಗಿದೆಯೇ ವಿನಃ ವಾಹನ ದಟ್ಟಣೆ ಕಡಿಮೆಯಾಗಿಲ್ಲ. ಇದರಿಂದ ಅಲ್ಲಲ್ಲಿ ಟ್ರಾಫಿಕ್ ಸಮಸ್ಯೆಗಳು ಕಾಣಿಸಿಕೊಂಡು ರಸ್ತೆಯಲ್ಲಿ ಓಡಾಡುವ ಪಾದಚಾರಿಗಳಿಗೆ , ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ.
ಮೂಡುಬಿದಿರೆ ಬೃಹತ್ ತಾಲೂಕಿನಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಇರದೇ ಇರುವುದು ಖೇದಕರ. ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳು ಕೆಲವೊಂದು ಪ್ರದೇಶಗಳಲ್ಲಿ ಕರ್ತವ್ಯವನ್ನು ನಿರ್ವಹಿಸಿದರೂ ಎಲ್ಲಾ ದಿನಗಳಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯು ಸಿಬ್ಬಂದಿಗಳ ಕೊರತೆಯನ್ನು ಹೊಂದಿರುವುದರಿಂದ ವಾರವಿಡೀ ಟ್ರಾಫಿಕ್ ವ್ಯವಸ್ಥೆಯಲ್ಲಿ ತೊಡಗಿಕೊಳ್ಳುವುದು ಕಷ್ಟಕರ. ತಾಲೂಕು ಇದೀಗ ಬೃಹತ್ ಮಟ್ಟದಲ್ಲಿ ಅಭಿವೃದ್ದಿ ಹೊಂದಿದ್ದು ಎಲ್ಲಿ ನೋಡಿದರಲ್ಲಿ ರಸ್ತೆಗಳು ನಿರ್ಮಾಣಗೊಂಡು ವಾಹನಗಳ ಸಂಖ್ಯೆ ದ್ವಿಗುಣಗೊಂಡಿದೆ. ಈ ಸಮಸ್ಯೆಯನ್ನು ನಿವಾರಿಸಲು ಟ್ರಾಫಿಕ್ ಪೊಲೀಸ್ ಠಾಣೆಯು ಅಗತ್ಯವಾಗಿ ಬೇಕಾಗಿದೆ.
ನಿಶ್ಮಿತಾ ವೃತ್ತದ ನಂತರ ಟೌನ್ ಮಿತಿಯನ್ನು ಪ್ರವೇಶಿಸಲು ಭಾರೀ ಗಾತ್ರದ ವಾಹನಗಳಿಗೆ ಪ್ರವೇಶವಿಲ್ಲ.
ಇದನ್ನು ಯಾರೂ ಅನುಸರಿಸುತ್ತಿಲ್ಲ. ಅಲ್ಲದೇ ನೋ ಎಂಟ್ರಿ ಬೋರ್ಡ್ ಕಾಣಿಸುವುದಿಲ್ಲ.
ಖಾಸಗಿ ಬಸ್ ಗಳು ತಡವಾಗಿ ಬಂದರೆ ಅವರು ಬಸ್ ನಿಲ್ದಾಣವನ್ನು ಪ್ರವೇಶಿಸುವಂತಿಲ್ಲ.
ನಂತರ ಪಟ್ಟಣದ ಮಿತಿಗಳ ಮೂಲಕ ಆ ಬಸ್ಸುಗಳು ಹೋಗಬೇಕು.ಮತ್ತೆ ಬಸ್ಸುಗಳಿಗೆ ನಿಲ್ದಾಣದ ಒಳಗೆ ಪ್ರವೇಶವಿಲ್ಲದ ಕಾರಣ ಟ್ರಾಫಿಕ್ ಬ್ಲಾಕ್ ಉಂಟಾಗುತ್ತದೆ.
ಕೆಲವೊಂದು ರಸ್ತೆಗಳಲ್ಲಿ ನೋ ಎಂಟ್ರಿ ರಸ್ತೆಗಳು ಹೆಸರಿಗಾಗಿ ಮಾತ್ರ, ಎಲ್ಲರೂ ಅವರು ಇಷ್ಟ ಬಂದಂತೆ ಗಾಡಿಯನ್ನು ನುಗ್ಗಿಸಿ ಎದುರಿನ ವಾಹನ ಹೋಗದಂತೆ ಟ್ರಾಫಿಕ್ ಜಾಮ್ ಉಂಟು ಮಾಡಿ ತಮಾಷೆ ನೋಡುತ್ತಾರೆ.
ಇವುಗಳೆಲ್ಲಾ ಸಮಸ್ಯೆಗಳು ಸಾಕಾಗಿಲ್ಲವೆಂದು ಪಟ್ಟಣ ಮಿತಿಯನ್ನು ಪ್ರವೇಶಿಸುವ ಎಲ್ಲಾ ಖಾಸಗಿ ಬಸ್ಸುಗಳು ಯಾರನ್ನೂ ಲೆಕ್ಕಿಸದೆ ಪಟ್ಟಣದ ಮಿತಿಯಲ್ಲಿ ಮಿತಿ ಮೀರಿ
ಜೋರಾಗಿ ಹಾರ್ನ್ ಹಾಕಿ ಓಡಿಸುತ್ತಾರೆ.ಜಿ.ವಿ.ಪೈ ಆಸ್ಪತ್ರೆ ಬಳಿ ಯಾವಾಗಲೂ ಬ್ಲಾಕ್. ಇದು ಆಸ್ಪತ್ರೆಯ ಪ್ರದೇಶ ಯಾವಾಗಲೂ ನಿರ್ಬಂಧಿಸುತ್ತದೆ. ಅನೇಕ ವಾಹನಗಳು ಜೋರಾಗಿ ಹಾರ್ನ್ ಹೊಡೆದು ಆಸ್ಪತ್ರೆಗೆ ತೊಂದರೆ ನೀಡುವುದಲ್ಲದೇ, ಎಲ್ಲಾ ಶಾಲಾ ಜಂಕ್ಷನ್‌ಗಳಲ್ಲಿ ಭಾರೀ ವಾಹನಗಳು ಹಾರ್ನ್ ಹಾಕಿಕೊಂಡು ಅತಿವೇಗವಾಗಿ ಓಡಾಡುತ್ತದೆ.ಟ್ರಾಫಿಕ್ ನಿಯಮಗಳು ಕೇವಲ ಬಾಯಿ ಮಾತಿಗಾಗಿ ಮಾತ್ರ ಎಂಬಂತೆ ವಾಹನ ಸವಾರರು ವರ್ತಿಸುತ್ತಿದ್ದಾರೆ.
ನಗರದಲ್ಲಿ ಸರಿಯಾದ ರಸ್ತೆ ಚಿಹ್ನೆಗಳಾಗಲಿ, ರಸ್ತೆ ಗುರುತುಗಳಾಗಲಿ ಇಲ್ಲ.ಸರ್ಕಾರಿ ಬಸ್ ಮತ್ತು ಖಾಸಗಿ ಬಸ್ (ಹಗಲು ಹೊತ್ತಿನಲ್ಲಿ ಮುಂಬೈಗೆ
ಹೋಗುವ ಬಸ್)ಗೆ ಸರಿಯಾದ ಪಾರ್ಕಿಂಗ್ ಸ್ಥಳವಿಲ್ಲ. ಅಷ್ಟು ಮಾತ್ರವಲ್ಲದೇ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳಿಗೆ ಸರಿಯಾದ ಪಾರ್ಕಿಂಗ್ ಸ್ಥಳವಿಲ್ಲದೇ ಖಾಸಗಿ ಬಸ್ಸ್ ಪಾರ್ಕಿಂಗ್ ಬಳಿ ವೆಚ್ಚ ಸಾರ್ವಜನಿಕರ ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸಿ ಹೋಗಿ ಬಸ್ಸು ನಿಲ್ಲಿಸಲು ಸ್ಥಳವಕಾಶವಿರದೇ ಬಸ್ಸು ಚಾಲಕರು ಪರದಾಡುವಂತಾಗಿದೆ.
ಸಾರ್ವಜನಿಕರಿಗೂ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿಲ್ಲದಿರುವುದರಿಂದ, ಜನ ಬೇಕಾದಲ್ಲಿ ಗಾಡಿ ಪಾರ್ಕ್ ಮಾಡಿ ಹೋಗುತ್ತಾರೆ. ಆದ್ದರಿಂದ ಸಾರ್ವಜನಿಕ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯು ಬಹಳಷ್ಟು ಸುಧಾರಿಸಬೇಕಾಗಿದ್ದು, ಪುರಸಭೆ, ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕಾಗಿದೆ.
ನಗರದ ಟ್ರಾಫಿಕ್ ಸಮಸ್ಯೆಯನ್ನು ಹೋಗಲಾಡಿಸಲು ಮೂಡುಬಿದಿರೆ ನಗರಕ್ಕೆ ಟ್ರಾಫಿಕ್ ಪೊಲೀಸ್ ಠಾಣೆಯೊಂದು ಬೇಕಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಿ ಸಾರ್ವಜನಿಕ ಸಭೆ ನಡೆಸಿ ಹೆಚ್ಚಿನ ಸಲಹೆ ಪಡೆದು ಇಂತಹವುಗಳನ್ನು ತಪ್ಪಿಸಬೇಕಾಗಿದೆ.
0 Comments