ಮೂಡುಬಿದಿರೆ: ಮೂಡುಬಿದಿರೆ ಲಯನ್ಸ್ ಕ್ಲಬ್ ವತಿಯಿಂದ, ಆಳ್ವಾಸ್ ಕಾಲೇಜಿನ ಸಮೀಪದ ವಿದ್ಯಾಗಿರಿಯಲ್ಲಿರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುವ ಹೋರ್ಡಿಂಗ್ ನ್ನು ಜಿಲ್ಲಾ ರಾಜ್ಯಪಾಲರಾದ ಲಯನ್ಸ್ ಸಂಜಿತ್ ಶೆಟ್ಟಿ ಗುರುವಾರ ಅನಾವರಣಗೊಳಿಸಿದರು.
ಮೂಡುಬಿದಿರೆ ಲಯನ್ಸ್ ಕ್ಲಬ್ ನ ಅಧ್ಯಕ್ಷ ಎಮ್.ಕೆ ದಿನೇಶ್,ಜಿಲ್ಲೆಯ ಪ್ರಥಮ ಮಹಿಳೆ ಪ್ರಗತಿ ಶೆಟ್ಟಿ , ವಲಯಾಧ್ಯಕ್ಷ ಮೆಲ್ವಿನ್ ಡಿ ಕೋಸ್ಟಾ , ಕ್ಲಬ್ ನ ಸದಸ್ಯರು ಹಾಗೂ ರಸ್ತೆ ಸುರಕ್ಷತಾ ಲಯನ್ಸ್ ಜಿಲ್ಲಾ ಸಂಯೋಜಕ ಶಿವಪ್ರಸಾದ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು
0 Comments