ಮತಾಂಧದಿಂದ ಹತ್ಯೆಗೊಳಗಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ರವರ ಕನಸಿನ ಮನೆಗೆ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಶಿಲನ್ಯಾಸ ನೆರವೇರಿಸಿದ್ದು ಪ್ರವೀಣ್ ನೆಟ್ಟಾರ್ ತಂದೆ ಶೇಖರ ಪೂಜಾರಿಯವರು ತಮ್ಮ ಭಾವುಕ ನುಡಿಗಳನ್ನಡಿದ್ದಾರೆ.
ನಳಿನ್ ಕುಮಾರ್ ಕಟೀಲ್ ರವರು ಮಗನ ಸ್ಥಾನದಲ್ಲಿ ನಿಂತು ಮನೆ ಕಟ್ಟಿಕೊಡುತ್ತಿದ್ದಾರೆ. ಇದು ನಮ್ಮ ಪಾಲಿಗೆ ಮನೆ ಅಲ್ಲ ನಮ್ಮ ಮಗ ನಮಗೆ ಕಟ್ಟಿಸುತ್ತಿರುವಂತಹ ದೇವಸ್ಥಾನವಾಗಿದೆ. ಇದನ್ನು ದೇವಸ್ಥಾನವೆಂದೇ ನಾವು ಪರಿಗಣಿಸುತ್ತಿದ್ದೇವೆ. ಅವನೀಗ ನಮ್ಮ ಜೊತೆ ಇಲ್ಲ ಆದರೆ ಅವನ ಸ್ಥಾನವನ್ನು ನಳಿನ್ ಕುಮಾರ್ ಕಟೀಲ್ ತುಂಬುತ್ತಿದ್ದಾರೆ ಎಂದು ಭಾವುಕವಾಗಿ ಉತ್ತರಿಸಿದರು.
0 Comments