ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ - ಪುಸ್ತಕ ಮಳಿಗೆಗಳಿಗೆ ಆಹ್ವಾನ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ:  ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬರಿಯು ಡಿಸೆಂಬರ್‌ 21ರಿಂದ 27ರವರೆಗೆ ಒಂದು ವಾರಗಳ ಕಾಲ  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ಅದ್ಧೂರಿಯಾಗಿ ಜರುಗಲಿದ್ದು, ಇದರಲ್ಲಿ ರಾಜ್ಯ, ರಾಷ್ಟ್ರ ವಿದೇಶಗಳ 50 ಸಾವಿರ ಪ್ರತಿನಿಧಿಗಳು ಹಾಗೂ 10 ಸಾವಿರ ಶಿಕ್ಷಕರು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ಪ್ರತಿ ದಿನ ಲಕ್ಷಕ್ಕೂ ಮೀರಿ ಆಸಕರು, ಜಾಂಬೂರಿಯನ್ನು ವೀಕ್ಷಿಸಲು ಭಾಗವಹಿಸುವ ನಿರೀಕ್ಷೆ ಇದೆ ಮಾತ್ರವಲ್ಲ, ಇದೊಂದು ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಾಡುವುದರಿಂದ ರಾಜ್ಯದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರವಾಸದ ಅವಕಾಶವನ್ನೂ ಕಲ್ಪಿಸಲಾಗಿದೆ. ಈ ಬೃಹತ್ ಸಮ್ಮೇಳನದ ಅಂಗವಾಗಿ ಅಭೂತಪೂರ್ವ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗುತ್ತಿದ್ದು, ಪುಸ್ತಕ ಮಳಿಗೆಗಳನ್ನು ಅಹ್ವಾನಿಸಲಾಗಿದೆ ಎಂದು ಸ್ಕೌಟ್ ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತ ಡಾ.ಎಂ.ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದ್ದಾರೆ.


ಅಂತರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್  ಸಾಂಸ್ಕೃತಿಕ ಜಾಂಬೂರಿಯಲ್ಲಿ ದೇಶ-ವಿದೇಶಗಳ ವಿದ್ಯಾರ್ಥಿಗಳು, ಪ್ರತಿನಿಧಿಗಳಾಗಿರುವುದರಿಂದ ಕನ್ನಡ ಪುಸ್ತಕಗಳ ಜೊತೆಗೆ ಇಂಗ್ಲೀಷ್, ಹಿಂದಿ ಹಾಗೂ ಇತರ ರಾಜ್ಯ ಮತ್ತು ಪ್ರಾದೇಶಿಕ ಭಾಷೆಗಳ ಪುಸ್ತಕಗಳ ಮಳಿಗೆಯಲ್ಲಿರಬೇಕಾದುದು

ಅಗತ್ಯ. ಭಾಗವಹಿಸುವ ಪುಸ್ತಕ ಮಳಿಗೆಗಳು ಜಾಂಬೂರಿಯ ಏಳು ದಿನಗಳ ಪುಸ್ತಕ ಮೇಳದಲ್ಲಿರಲೇ ಬೇಕು. ಮಳಿಗೆಗಳಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಮಳಿಗೆಯ ಇಬ್ಬರಿಗೆ ವಸತಿ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗುವುದು. ಭಾಗವಹಿಸುವ ಮಳಿಗೆಗಳು ನವೆಂಬರ್ 30ರ ಮೊದಲು ಪತ್ರ ಬರೆದು ಭಾಗವಹಿಸುವ ಬಗ್ಗೆ ಖಚಿತ ಪಡಿಸಿಕೊಳ್ಳುವಂತೆ ತಿಳಿಸಲಾಗಿದ್ದು,(ಪತದ ಹೊರ ಲಕೋಟೆಯಲ್ಲಿ ಸ್ಪಷ್ಟವಾಗಿ "ಅಂತಾರಾಷ್ಟ್ರೀಯ ಸೆಟ್ ಗೈಡ್ ಸಾಂಸ್ಕೃತಿಕ, ಜಾಂಬೂರಿ -ಪುಸ್ತಕ ನಮೂದಿಸಿರತಕ್ಕದ್ದು.) ಹೆಚ್ಚಿನ ಮಾಹಿತಿಗಾಗಿ ಡಾ.ಯೋಗೀಶ್ ಕೈರೋಡಿ(9845704371), ಅಂಬರೀಷ್ ಚಿಪ್ನೊಳ್ಕರ್ 9845882048 ರನ್ನು ಸಂಪರ್ಕಿಸಬಹುದಾಗಿದೆ ಎಂದು ಆಳ್ವ ತಿಳಿಸಿದ್ದಾರೆ.

Post a Comment

0 Comments