ಇಟಲದ ಕೊಡಿಮರಕ್ಕೆ ಪುತ್ತೂರು-ಬಂಟ್ವಾಳದಲ್ಲಿ ಭವ್ಯ ಸ್ವಾಗತ: ಶಾಸಕರ ಉಪಸ್ಥಿತಿ

ಜಾಹೀರಾತು/Advertisment
ಜಾಹೀರಾತು/Advertisment


 ಮೂಡುಬಿದಿರೆ:ಪಣಪಿಲ ಅರಮನೆಗೆ ಸಂಬಂಧಿಸಿದ ಕೊನ್ನಾರ ಮಾಗಣೆಯ ದರೆಗುಡ್ಡೆ ಮಹತೋಭಾರ ಶ್ರೀ ಕ್ಷೇತ್ರ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಕೊಡಿಮರ ಮೆರವಣಿಗೆ ಸುಳ್ಯದಿಂದ ಆರಂಭಗೊಂಡಿದ್ದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನಗಳೊಂದಿಗೆ ಕಾರ್ಯಕ್ರಮ ನಡೆಯಿತು. 


ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು, ಪುತ್ತೂರು ನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ಜಗನ್ನಿವಾಸ ರಾವ್, ಪುತ್ತೂರು ಪುರಸಭಾ ಅಧ್ಯಕ್ಷರಾದ ಶ್ರೀ ಜೀವಂಧರ  ಜೈನ್, ಹಾಗೂ ಇತರೆ  ಪ್ರಮುಖರಿಂದ ಕೊಡಿಮರ  ಮೆರವಣಿಗೆಗೆ ಸ್ವಾಗತ ದೊರತಿದ್ದು ಈ ಸಂದರ್ಭದಲ್ಲಿ ವಿಶೇಷ ಪೂಜೆ ನಡೆಯಿತು.


ನಂತರ ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯ್ಕ್, ಬಂಟ್ವಾಳ ಬೂಡಾ ಅಧ್ಯಕ್ಷರಾದ ದೇವದಾಸ್ ಶೆಟ್ಟಿಯವರು ಕೊಡಿಮರ ಸ್ವಾಗತಿಸಿದರು.


ಶಾಸಕರುಗಳ ಜೊತೆಗೆ ಪಣಪಿಲ ಅರಮನೆಯ  ಮುಖ್ಯಸ್ಥರಾದ ಶ್ರೀ ಬಿ.ವಿಮಲ್ ಕುಮಾರ್ ಶೆಟ್ಟಿ, ಜೀರ್ಣೋದ್ಧಾರ  ಸಮಿತಿ ಕಾರ್ಯಧ್ಯಕ್ಷರಾದ ಶ್ರೀ ಸುಕೇಶ್ ಶೆಟ್ಟಿ ಎದಮೇರು, ಶ್ರೀ ಕ್ಷೇತ್ರ ಇಟಲದ ಅಸ್ರಣ್ಣರಾದ  ನಾಗರಾಜ್ ಭಟ್,ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿಗಳಾದ ಸುಧೀಶ್ ಜೈನ್, ಪ್ರಧಾನ ಕಾರ್ಯದರ್ಶಿಗಳಾದ ಪ್ರಮೋದ್ ಆರಿಗ ಮಜಲೋಡಿ ಗುತ್ತು ಹಾಗೂ ಇತರೆ ಪ್ರಮುಖರು ಉಪಸ್ಥಿತರಿದ್ದರು.

Post a Comment

0 Comments