ದರೆಗುಡ್ಡೆಯಲ್ಲಿ ರೂ.1 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ದರೆಗುಡ್ಡೆ ಗ್ರಾ.ಪಂ.ವ್ಯಾಪ್ತಿಯ ಕೆಲ್ಲಪುತ್ತಿಗೆ ಹಾಗೂ ದರೆಗುಡ್ಡೆ ಗ್ರಾಮದಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ಮತ್ತು ಅಬಿವೃದ್ಧಿಗೊಂಡಿರುವ ವಿವಿಧ ಕಾಮಗಾರಿಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಚಾಲನೆಯನ್ನು ನೀಡಿದರು.

  ನಂತರ ಮಾತನಾಡಿದ ಕೋಟ್ಯಾನ್ ಅವರು ತನ್ನ ಕ್ಷೇತ್ರದಲ್ಲಿ ಜನವರಿಯೊಳಗೆ ಸುಮಾರು ರೂ 18000 ಯ ವಿವಿಧ ಕಾಮಗಾರಿಗಳು ನಡೆಯಲಿವೆ ಅದಕ್ಕಾಗಿ ರಾಜ್ಯದ  ಮುಖ್ಯಮಂತ್ರಿಗಳು ಮತ್ತು ಲೋಕೋಪಯೋಗಿ ಇಲಾಖೆಯ ಸಚಿವರು ಅನುದಾನವನ್ನು ಮೀಸಲಿಡುವ ಭರವಸೆಯಿದೆ ಎಂದರು.

ದರೆಗುಡ್ಡೆ ಗ್ರಾ.ಪಂ.ವ್ಯಾಪ್ತಿಯಲ್ಲಿ   ರಸ್ತೆಗಳನ್ನು ಕಾಂಕ್ರೀಟ್ ಕರಣಗೊಳಿಸುವ ಮೂಲಕ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಇದಲ್ಲದೆ ಇನ್ನೂ ನಿರಂತರವಾಗಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಳು ನಡೆಯಲಿವೆ ಎಂದು ತಿಳಿಸಿದರು.

  50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ದರೆಗುಡ್ಡೆ ಗ್ರಾಮದ ಆದಿಶಕ್ತಿ ದೇವಸ್ಥಾನಕ್ಕೆ ಹೋಗುವ ರಸ್ತೆ, 5ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ಕೆಲ್ಲಪುತ್ತಿಗೆ ಧಾರೇಬೆಟ್ಟು ರಸ್ತೆಗೆ ಗುದ್ದಲೀಪೂಜೆ ಮತ್ತು ಪಂಚಾಯತ್ ವ್ಯಾಪ್ತಿಯಲ್ಲಿ ರೂ 25 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ಗೊಂಡಿರುವ ಗುರುಬೆಟ್ಟು ರಸ್ತೆ, ಕೆಲ್ಲಪುತ್ತಿಗೆಯ ಪುನ್ಕೆನಾಲಜೆ-ಮುಗೆರ್ ಕಲದಲ್ಲಿ ರೂ 10 ಲಕ್ಷದಲ್ಲಿ ಕಾಂಕ್ರೀಟೀಕರಣಗೊಂಡಿರುವ, ಕೆಲ್ಲಪುತ್ತಿಗೆ ಪುನ್ಕೆನಾಲಜೆಯ 5ಸೆಂಟ್ಸ್ ನಲ್ಲಿ ರೂ 5.50ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಕಾಂಕ್ರೀಟ್ ರಸ್ತೆ ಮತ್ತು ದರೆಗುಡ್ಡೆಯ ಜನತಾ ಕಾಲನಿಯಲ್ಲಿ ರೂ 5 ಲಕ್ಷದಲ್ಲಿ ಅಭಿವೃದ್ಧಿಗೊಂಡಿರುವ ಕಾಂಕ್ರಿಟ್ ರಸ್ತೆಯನ್ನು ಶಾಸಕ ಕೋಟ್ಯಾನ್    ಲೋಕಾರ್ಪಣೆಗೊಳಿಸಿದರು.

Post a Comment

0 Comments