ಉಡುಪಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಉಡುಪಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಒಟ್ಟು 36 ಮಂದಿ ಸಾಧಕರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ದೈವಾರಾಧನೆಯಲ್ಲಿ ಕಾರ್ಕಳ ತಾಲೂಕಿನ ಹೀರ್ಗಾನ ಗ್ರಾಮದ ಮೂರೂರು ಗರಡಿ ಪಾತ್ರಧಾರಿ ಲೋಕುರಿ, ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ನಾಗರಾಜ ಪಾಣ, ಯಕ್ಷಗಾನ ಕ್ಷೇತ್ರದಲ್ಲಿ ಬೈಂದೂರು ತಾಲೂಕಿನ ಹೇರೂರು ಗ್ರಾಮದ ರಾಮಯ್ಯ ಬಳೆಗಾರ್, ಕಾಪು ತಾಲೂಕಿನ ಪಲಿಮಾರು ಗಿರೀಶ್, ಬೈಂದೂರು ತಾಲೂಕಿನ ಆಲೂರು ಗ್ರಾಮದ ಸುರೇಂದ್ರ ಮೊಗವೀರ, ರಂಗಭೂಮಿ ಕ್ಷೇತ್ರದಲ್ಲಿ ಬ್ರಹ್ಮಾವರ ತಾಲೂಕಿನ ಬಾರ್ಕೂರು ಗ್ರಾಮದ ಕಾಪು ತಾಲೂಕಿನ ಬ್ರಹ್ಮಾವರ ಗ್ರಾಮದ ಕಟಪಾಡಿ ಗ್ರಾಮದ ರಾಜ ಕಟಪಾಡಿ, ಕೃಷಿ/ಹೈನುಗಾರಿಕೆಯಲ್ಲಿ ಬ್ರಹ್ಮಾವರ ತಾಲೂಕಿನ ಕೋಟ ಮಣೂರಿನ ಜಾನಕಿ ಹಂದೆ ಉಡುಪಿ ದೊಡ್ಡಗುಡ್ಡೆಯ ಕಮಲಮ್ಮ, ಉಡುಪಿ ತಾಲೂಕಿನ ಉದ್ಯಾವರ ಜೂಲಿಯನ್ ದಾಂತಿ,ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಬಾಬು.ಕೆ ಸಾಂತೂರು ಕೊಪ್ಪ ,ಕುಂದಾಪುರ ತಾಲೂಕಿನ ಯಾಕುಬ್ ಗುಲ್ವಾಡಿ,ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಉಡುಪಿ ತಾಲೂಕಿನ ಅಂಬಲ್ಪಾಡಿ ಕೆ. ಮಂಜಪ್ಪ ಸುವರ್ಣ, ಉಡುಪಿ ತಾಲೂಕಿನ ಸುಚಿತಾ ಪೈ, ಕಾಪು ತಾಲೂಕಿನ ನೀಲಾಧರ ಶೇರಿಗಾರ್, ಪಾಕತಜ್ಞ ಎಣ್ಣೆ ಪ್ರವೀಣರಾದ ಉಡುಪಿ ತಾಲೂಕಿನ ಬಡಗಬೆಟ್ಟು ನಾರಾಯಣ ಬೆಳಿರಾಯ, ಕಾಪು ತಾಲೂಕಿನ ಎಲ್ಲೂರು ವೆಂಕಟೇಶ್ ದೇವಾಡಿಗ, ಪತ್ರಿಕೋದ್ಯಮದಲ್ಲಿ ಉದಯವಾಣಿ ವರದಿಗಾರ ಕಾಪು ತಾಲೂಕಿನ ರಾಮಚಂದ್ರ ಆಚಾರ್ಯ ಪಡುಬಿದ್ರೆ ,ಕಳೆಯಲ್ಲಿ ಕಾಪು ತಾಲೂಕಿನ ಮೂಡುಬೆಳ್ಳೆ ಗಣೇಶ್ ಮರ್ಣೆ, ನಾಯಕ್, ಸಂಕೀರ್ಣದಲ್ಲಿ ಉಡುಪಿ ತಾಲೂಕಿನ ಮಣಿಪುರ ಗ್ರಾಮದ ಕನ್ನರ್ಪಾಡಿ ವಾದಿರಾಜ ಭಟ್, ಉಡುಪಿ ಡಾ.ಉಷಾ ಚಡಗ, ತೆಂಕನಿಡಿಯೂರು ದಯಾನಂದ ಶೆಟ್ಟಿ, ಕಾರ್ಕಳ ತಾಲೂಕಿನ ಹಿರಿಯಂಗಡಿ ಸುಬ್ರಮಣ್ಯ ಆಚಾರ್ಯ, ಜಾನಪದ ಕ್ಷೇತ್ರದಲ್ಲಿ ಬ್ರಹ್ಮಾವರ ತಾಲೂಕಿನ ರಾಘವೇಂದ್ರ ಶೆಟ್ಟಿ ಗಿಳಿಯಾರು, ಕಾಪು ತಾಲೂಕಿನ ಹರೀಶ್ ಕುಮಾರ್. ಸಮಾಜಸೇವೆಯಲ್ಲಿ ಉಡುಪಿ ತಾಲೂಕಿನ ಈಶ್ವರ ಮಲ್ಪೆ, ಕಾರ್ಕಳ ತಾಲೂಕಿನ ರಾಮಚಂದ್ರ ನಾಯಕ್, ಹೆಬ್ರಿ ತಾಲೂಕಿನ ಐತು ಕುಲಾಲ್, ಕ್ರೀಡಾ ಕ್ಷೇತ್ರದಲ್ಲಿ ಉಡುಪಿ ಸಂತೆಕಟ್ಟೆಯ ಅಭಿನ್ ದೇವಾಡಿಗ, ಉಡುಪಿ ಕಟಪಾಡಿ ಸುಲತಾ ಕಾಮತ್,
0 Comments