ಪಿಂಗಾರ ಕಲಾವಿದೆರ್ ತಂಡದ ಭರಣಿ ಕೃತಿಕೆ ನಾಟಕ ಮುಹೂರ್ತ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಪಿಂಗಾರ ಕಲಾವಿದೆರ್ ಬೆದ್ರ ನಾಟಕ ತಂಡದ ಈ ವರ್ಷದ ಹೊಸ ನಾಟಕ "ಭರಣಿ ಕೃತಿಕೆ" ನಾಟಕದ ಮುಹೂರ್ತ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ನಡೆಯಿತು.

ಪಿಂಗಾರ ಕಲಾವಿದೆರ್ ಬೆದ್ರ ತಂಡ 2011 ರಲ್ಲಿ ಆರಂಭಗೊಂಡು ರಂಗಭೂಷಣ ಮಣಿ ಕೋಟೆಬಾಗಿಲು ಇವರ ರಚನೆ ಮತ್ತು ನಿರ್ದೇಶನದಲ್ಲಿ ಆಯೆ ಬರೆತಿಜೆ, ನಮ ನಮ್ಮಾತೆಗೆ, ರಂಗಭೂಮಿ, ಎರೆನ್ ಎಂಚ ನಂಬುನು, ಪುದರ್ ಎಂಚ ದೀವೊಡು, ನಂಬುಂಡ ನಂಬುಲೆ ನಾಟಕವನ್ನು ತುಳು ರಂಗಭೂಮಿಗೆ ಕೊಡುಗೆಯಾಗಿ ನೀಡಿದೆ. 

ತಂಡದ ಏಳನೇ ನಾಟಕ ಭರಣಿ ಕೃತಿಕೆ ಮುಹೂರ್ತದ ಸಂದರ್ಭದಲ್ಲಿ ತಂಡದ ನಿರ್ದೇಶಕ, ನಾಟಕ ರಚನೆಕಾರ ಮಣಿ ಕೋಟೆಬಾಗಿಲು, ತಂಡದ ಸಂಚಾಲಕ ರಂಜಿತ್ ಕಾಶಿಪಟ್ನ, ತಂಡದ ಸಂಗೀತ ನಿರ್ವಾಹಕ ಶಿವು ನಾರಾವಿ ಮತ್ತು ಕಲಾವಿದರಾದ ಸಚಿನ್ ಬೈಲೂರು, ಯೋಗಿಶ್ ಪೆರಲ್ಕೆ ಪಂಚೇಶ್ ಚಾರ್ಮಾಡಿ,ಸುನಿಲ್ ಪಡ್ಡಂದಡ್ಕ, ಶಿವರಾಜ್ ವಾಮದಪದವು, ಶಿವಂ ಪದವು, ಚೇತನ್ ಕೊಡ್ಲಕ್ಕೆ, ನಳಿನಿ ಸುವರ್ಣ, ತನುಷ್ ವಾಮಂಜೂರು, ವಸಂತ್ ಗುಣನಿಲ ನಾರಾವಿ, ಭಾಸ್ಕರ್ ಕೋಟ್ಯಾನ್,ಪುತ್ತಿಗೆ,ಸಂತೋಷ್ ಕೋಟೆಬಾಗಿಲು ಉಪಸ್ಥಿತರಿದ್ದರು.ಈ ನಾಟಕದ ಪ್ರಥಮ ಪ್ರದರ್ಶನ ಶೀಘ್ರದಲ್ಲಿ ಮೂಡಬಿದಿರೆಯಲ್ಲಿ ನಡೆಯಲಿದೆ .

Post a Comment

0 Comments