ಕೋಟಿ ಚೆನ್ನಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಗೆ ಚಾಲನೆ.! ಸಚಿವ ಕೋಟ ಕನಸಿಗೆ ಮೊದಲ ಮುದ್ರೆ

ಜಾಹೀರಾತು/Advertisment
ಜಾಹೀರಾತು/Advertisment


 ಕರ್ನಾಟಕ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಮಹತ್ವಾಕಾಂಕ್ಷೆಯ  ಯೋಜನೆಯಾದ ಅಗ್ನಿಪಥ್ ಗೆ ಪೂರಕವಾಗಿ   ಸೇನಾ ಆಯ್ಕೆ ಪೂರ್ವ ತರಬೇತಿ  ಶಾಲೆಯ ಉದ್ಘಾಟನಾ ಕಾರ್ಯಕ್ರಮವು  ಉಡುಪಿಯ ಕಿದಿಯೂರಿನ ಶೇಷಶಯನ  ಸಭಾಂಗಣದಲ್ಲಿ ನಡೆಯಿತು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕನಸಿನ ಯೋಜನೆಯಾದ  ಇದು ಉಡುಪಿಯಲ್ಲಿ ಕೋಟಿ-ಚೆನ್ನಯರ ಹೆಸರಿನಲ್ಲಿ, ದಕ್ಷಿಣಕನ್ನಡ ಜಿಲ್ಲೆಯಲ್ಲಿ  ರಾಣಿ ಅಬ್ಬಕ್ಕನ ಹೆಸರಿನಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೇಂಜ ನಾಯ್ಕ್ ಹೆಸರಿನಲ್ಲಿ  ಕಾರ್ಯಾರಂಭಿಸಲಿದೆ. ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಗೆ ಪೂರಕವಾಗಿ ಯುವಕರನ್ನು ಸಜ್ಜುಗೊಳಿಸಿ 100 ಮಂದಿ ಅರ್ಹ ಯುವಕರಿಗೆ ಸೇನಾ ತರಬೇತಿಯನ್ನು ನೀಡಿ ಅಗ್ನಿಪಥ್ ಯೋಜನೆಯ ಮೂಲಕ ಅವರನ್ನು ಸೈನ್ಯಕ್ಕೆ ಕಳಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.


ಯೋಜನೆಗೆ ಅರ್ಹ ಯುವಕರಿಗೆ  ಹಾಸ್ಟೆಲ್ ವ್ಯವಸ್ಥೆ ಊಟೋಪಚಾರದ ವ್ಯವಸ್ಥೆಯನ್ನು ಸರ್ಕಾರದ ಮೂಲಕವೇ ಮಾಡಲಾಗುತ್ತದೆ ಎಂದು ಸಚಿವ   ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು. ಮಾತ್ರವಲ್ಲದೆ ನುರಿತ  ತರಬೇತುದಾರರು ಮತ್ತು ನಿವೃತ್ತ ಯೋಧರಿಂದ  ತರಬೇತಿಗೊಳಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಕೋಟಿ ಚೆನ್ನಯ ಸೇನಾ ಆಯ್ಕೆ  ಪೂರ್ವ ತರಬೇತಿ ಶಾಲಾ  ಉದ್ಘಾಟನಾ ಸಮಾರಂಭದಲ್ಲಿ ಸಚಿವರ ಜೊತೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್ ಅಂಗಾರ, ಮಾಜಿ ಶಾಸಕರು ಹಾಗೂ ಮಾಜಿ ಯೋಧರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಹಿಂದುಳಿದ ವರ್ಗಗಳ ಆಯೋಗದ ರಾಜ್ಯಾಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ , ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿಗಳು ಸಹಿತ ಇತರ ಪ್ರಮುಖರು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Post a Comment

0 Comments