ದಶದಿಕ್ಕುಗಳಿಂದಲೂ ಮಂಗಳೂರಿಗೆ ಮುತ್ತಿಟ್ಟ ಮೋದಿ ಅಭಿಮಾನಿಗಳು.! ನಮೋ ಮೇನಿಯಾಗೆ ಸಾಕ್ಷಿಯಾದ ಕಡಲ ನಗರಿ.!

ಜಾಹೀರಾತು/Advertisment
ಜಾಹೀರಾತು/Advertisment

 

ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಮಂಗಳೂರಿನ ಮೋದಿ ಅಭಿಮಾನಿಗಳು ದಶ ದಿಕ್ಕುಗಳಿಂದಲೂ ಆಗಮಿಸಿ ಮತ್ತೊಮ್ಮೆ ಇತಿಹಾಸ ಮೆರೆದಿದ್ದಾರೆ. ವಿವಿಧ ಕಡೆಗಳಿಂದ ಲಕ್ಷಾಂತರ ನರೇಂದ್ರ ಮೋದಿ ಅಭಿಮಾನಿಗಳು ಮಂಗಳೂರಿನ ಗೋಲ್ಡ್ ಫಿಂಚ್ ಮೈದಾನಕ್ಕೆ ಆಗಮಿಸಿದ್ದು ಕೇಸರಿಮಯ ಅಬ್ಬರಿಸುತ್ತಿದೆ. ಅತ್ತ ಉಡುಪಿ ಜಿಲ್ಲೆಯಿಂದಲೂ ಅಭಿಮಾನಿಗಳು ಆಗಮಿಸಿದ್ದು ದಶ ದಿಕ್ಕುಗಳಿಂದಲೂ ಕಾರ್ಯಕರ್ತರು ಮತ್ತು ನರೇಂದ್ರ ಮೋದಿಯವರ ಅಭಿಮಾನಿಗಳು ಮಂಗಳೂರಿಗೆ ಹೊಸ ರಂಗನ್ನು ನೀಡಿದ್ದಾರೆ. ಸುಮಾರು 3800 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿಯವರು ಇಂದು ನೆರವೇರಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಲಕ್ಷಾಂತರ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮೋದಿಯವರನ್ನು ನೋಡಲು ಬೇರೆ ಬೇರೆ ಕಡೆಗಳಿಂದ ಆಗಮಿಸಿದ್ದು ಕೇಸರಿಮಯವಾಗಿದೆ.

Post a Comment

0 Comments