ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಂಗಳೂರು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಈ ಹಿನ್ನಲೆಯಲ್ಲಿ ಮಂಗಳೂರು ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ. ಕೇವಲ 10 ದಿನದಲ್ಲಿ ಕಾರ್ಯಕ್ರಮವು ಆಯೋಜನೆಗೊಂಡಿದ್ದು ಮಂಗಳೂರಿನಲ್ಲಿ ನರೇಂದ್ರ ಮೋದಿಯವರ ಸಮಾವೇಶವನ್ನು ಏರ್ಪಡಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ನರೇಂದ್ರ ಮೋದಿ ಅವರ ಸಮಾವೇಶದ ಸಾಂಪ್ರದಾಯಿಕ ಮೈದಾನವಾಗಿರುವ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಸಮಾವೇಶ ಏರ್ಪಡಿಸುವುದು ಸಹಜ ಆದರೆ ಈ ಬಾರಿ ಅಲ್ಲಿ ಹಿಂದೂ ಯುವ ಸೇನೆಯ ವತಿಯಿಂದ ನಡೆಯುವ ಗಣೇಶ ಚತುರ್ಥಿ ಇರುವ ಕಾರಣ ಅಲ್ಲಿ ಸಮಾವೇಶ ನಡೆಸಲು ಅಸಾಧ್ಯವಾಗಿತ್ತು. ಈ ಹಿನ್ನಲೆಯಲ್ಲಿ ಮಂಗಳೂರಿನ ಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಸಿಟಿಯಲ್ಲಿ ಕಾರ್ಯಕ್ರಮ ನಡೆಸುವುದು ಎಂದು ತೀರ್ಮಾನಿಸಲಾಯಿತು. ಆದರೆ ಹುಲ್ಲು ಕಡ್ಡಿಗಳಿಂದ ತುಂಬಿ ಶಿಥಿಲಗೊಂಡಿದ್ದ ಮೈದಾನವನ್ನು ದುರಸ್ತಿಗೊಳಿಸುವುದು ಅತ್ಯಂತ ಕಷ್ಟದ ವಿಚಾರವಾಗಿತ್ತು. ಆದರೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಈ ಕಾಮಗಾರಿಯನ್ನು ಸಹಿತ ಮೈದಾನವನ್ನು ಶುಚಿಗೊಳಿಸುವ ಎಲ್ಲಾ ಜವಾಬ್ದಾರಿಯನ್ನು ಸ್ವತಃ ನಳಿನ್ ಕುಮಾರ್ ಕಟೀಲ್ ಅವರೇ ಜವಾಬ್ದಾರಿ ವಹಿಸಿಕೊಂಡು ಮುತುವರ್ಜಿಯಿಂದ ಜಿಲ್ಲಾಡಳಿತದ ಜೊತೆಗೆ ಕೆಲಸ ಮಾಡಿಸಿದ್ದಾರೆ.
ಪ್ರತಿದಿನದಂತೆ ಮೂರರಿಂದ ನಾಲ್ಕು ಬಾರಿ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದರು. ವಿಶಾಲವಾದ ಮೈದಾನದಲ್ಲಿ ಸುಮಾರು ಒಂದು ಲಕ್ಷದಿಂದ ಎರಡು ಲಕ್ಷ ಜನ ಸೇರುವ ನಿರೀಕ್ಷೆ ಜಿಲ್ಲಾಡಳಿತ ಹಾಗೂ ಭಾರತೀಯ ಜನತಾ ಪಾರ್ಟಿಯ ನಾಯಕರಿಗಿತ್ತು. ಆದರೆ ನಿರೀಕ್ಷೆಗೂ ಮೀರಿ ಸುಮಾರು ಐದು ಲಕ್ಷಕ್ಕಿಂತ ಮಿಗಿಲು ಜನ ಸೇರಿದ್ದು ಮತ್ತೊಮ್ಮೆ ಅಚ್ಚರಿಯನ್ನು ಮೂಡಿಸಿದೆ. ಕೇವಲ 10 ದಿನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಇಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಕಂಡಂತಹ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕಾರ್ಯ ಚತುರತೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದ್ದು ಖುದ್ದು ನಳಿನ್ ಕುಮಾರ್ ಕಟೀಲ್ ಅವರೇ ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿರುವ ನಳಿನ್ ಕುಮಾರ್ ಕಟೀಲ್ ಅವರು 10 ದಿನದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿ ಯಶಸ್ವಿಗೊಳಿಸಿದ ಎಲ್ಲಾ ಅಧಿಕಾರಿಗಳು ಮತ್ತು ಪಕ್ಷದ ನಾಯಕರುಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ
0 Comments