ಅವರು ಮೂಡುಬಿದಿರೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ತಾಲೂಕು ಆಡಳಿತ ಸೌಧದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ತಾಲೂಕಾಗಿ ಘೋಷಣೆಯಾದ ಮೂಡುಬಿದಿರೆ ಇಂದು ಸುಸಜ್ಜಿತವಾಗಿ ಅಭಿವೃದ್ಧಿ ಕಾಣುತ್ತಿದೆ. ಬೃಹತ್ ಆಡಳಿತ ಸೌಧ, ರಸ್ತೆಗಳ ಅಭಿವೃದ್ಧಿ, ಮೂಲಭೂತ ಸೌಕರ್ಯಕ್ಕೆ ಒತ್ತು ಸೇರಿದಂತೆ ಪ್ರತೀ ಮನೆಗೂ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಅನುಷ್ಠಾನಗೊಳಸಲಾಗುತ್ತಿದೆ.
ತಾಲೂಕಿನಾದ್ಯಂತ 100 ಕೋಟಿಗೂ ಅಧಿಕ ವೆಚ್ಚದ ಆಣವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಮೂಡುಬಿದಿರೆಯ ನಿಶ್ಮಿತಾ ಟವರ್ಸ್ ನಿಂದ ಅಶ್ವತ್ಥಪುರದ ತನಕ ಅನುಷ್ಟಾನದ ರಸ್ತೆ ನಿರ್ವಾಣವಾಗಲಿದೆ, ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಪೇಪರ್ ಮಿಲ್ ನಿಂದ ವಿದ್ಯಾಗಿರಿಯ ತನಕದ ರಿಂಗ್ ರೋಡ್ ಪ್ರಗತಿಯಲ್ಲಿದೆ, ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ನಿರಂತರ ನಡೆಯುತ್ತಿದೆ. ಒಟ್ಟಿನಲ್ಲಿ ಸರ್ವತೋಮುಖ ಅಭಿವೃದ್ಧಿಯ ಕಾರ್ಯ ತಾಲೂಕಿನಲ್ಲಾಗುತ್ತಿದೆ ಎಂದರು.
ತಹಶೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು ರಾಷ್ಟ್ರ ಧ್ವಜವನ್ನರಸಿ ಮಾತನಾಡಿ 'ಜಾತಿ, ಮತ, ಧರ್ಮಗಳ ಎಲ್ಲೆಗಳನ್ನು ಮೀರಿ ಎಲ್ಲರೂ ಸೇರಿ ಸಂಭ್ರಮಿಸುವ ಹಬ್ಬ ಸ್ವಾತಂತ್ರೋತ್ಸವ ಆಗಿದೆ ಎಂದರು, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಮೂಡಬಿದಿರೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮೇಘನಾಥ್ ಶೆಟ್ಟಿ, ಪುರಸಭಾ
ಉಪಾಧ್ಯಕ್ಷೆ ಸುಜಾತಾ ಶಶಿಕಿರಣ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದಯಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ರಾಜಶ್ರೀ ಅ, ಹಿರಿಯ ವಕೀಲ ಕೆ.ಆರ್.ಪಂಡಿತ್, ಪೊಲೀಸ್ ನಿರೀಕ್ಷಕ ನಿರಂಜನ್ ಕುಮಾರ್, ಸೇರಿದಂತೆ ಅನೇಕ ಗಣ್ಯರಿದ್ದರು. ಪುರಸಭಾ ಮುಖ್ಯಾಧಿಕಾರಿ ಇಂದು ಎಂ ಸ್ವಾಗತಿಸಿದರು.
ವಿವಿಧ ಶಿಕ್ಷಣ ಸಂಸ್ಥೆಯ - ವಿದ್ಯಾರ್ಥಿಗಳಿಂದ ಮತ್ತು ಪೊಲೀಸ್ ಇಲಾಖೆ, ಗೃಹರಕ್ಷಕ ದಳದಿಂದ ಪಥ ಸಂಚಲನ ನಡೆಯಿತು.
0 Comments