ರಾಜ್ಯ ರೈತ ಸಂಘದ ಮಾಪಾ೯ಡಿ ಘಟಕದಿಂದ "ಕೃಷಿ-ತುಳುವೆರೆ ಖುಷಿ" : ಸಾಧಕರಿಗೆ ಸನ್ಮಾನ
ಮೂಡುಬಿದಿರೆ : ಕನಾ೯ಟಕ ರಾಜ್ಯ ರೈತ ಸಂಘ, ಮಾಪಾ೯ಡಿ ರೈತ ಘಟಕದ ಆಶ್ರಯದಲ್ಲಿ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ 'ಕೃಷಿ-ತುಳುವೆರೆ ಖುಷಿ' ಕಾಯ೯ಕ್ರಮವು ಶನಿವಾರ ಸಂಜೆ ಕಲ್ಲಬೆಟ್ಟು ನಡ್ಯೋಡಿ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ದೀಪ ಬೆಳಗಿಸಿ, ಕಲಸೆಗೆ ಅಕ್ಕಿ ತುಂಬಿಸುವ ಮೂಲಕ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ರೈತನ ಬದುಕು ಕಷ್ಟದ ಬದುಕು. ಭತ್ತ ಹೇಗೆ ಆಗುತ್ತದೆ ಅದನ್ನು ಬೆಳೆಸುವುದು ಹೇಗೆ ಎಂಬುದು ರೈತನಿಗೆ ಗೊತ್ತಿರುತ್ತದೆ. ಕೆಲವರು ರೈತ ಸಂಘದ ಹೆಸರು ಹೇಳಿ ಚುನಾವಣೆಗೆ ನಿಂತವರಿದ್ದಾರೆ ಆದರೆ ರೈತ ಸಂಘದ ಚಿಹ್ನೆಯಲ್ಲಿ ಗೆದ್ದವರು ಈ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯರು ಆದ್ದರಿಂದಲೇ ಅವರಿಂದು ಬಡವರಿಗೆ ಅನ್ನ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದ ಅವರು ಈ ಘಟಕದವರು ಸ್ವ ಸಹಾಯ ಸಂಘವನ್ನು ಮಾಡಿ ಆ ಮೂಲಕ 1 ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಸನ್ಮಾನ : ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಉಷಾಲತಾ, ಹಿರಿಯ ಕೃಷಿಕರಾದ ಬಾಬು ಮಡಿವಾಳ, ಸುನಂದಮ್ಮ, ಕೃಷಿ ಕಾಮಿ೯ಕರಾದ ಹಾಮದ್, ಲೀಲಾ ಓಬಯ್ಯ ಪೂಜಾರಿ ಮತ್ತು ಅಪ್ಪಿ ಪೂಜಾರ್ತಿಯನ್ನು ಸನ್ಮಾನಿಸಲಾಯಿತು.
ಗೌರವ : ಪ್ರತಿಭಾನ್ವಿತ ವಿದ್ಯಾಥಿ೯ಗಳಾದ ತ್ರಿಷಾ ಶೆಟ್ಟಿ, ಖುಷಿ ಯು. ಜೈನ್, ಸುಧನ್ ಆರ್.ಎಸ್, ಸ್ವಸ್ತಿಕ್ ಎನ್. ಶೆಟ್ಟಿ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉದ್ಯಮಿ ಶ್ರೀಪತಿ ಭಟ್, ಸುಜೀರ್ ಗುತ್ತು ಐತಪ್ಪ ಆಳ್ವ, ತಿಮ್ಮಯ್ಯ ಶೆಟ್ಟಿ, ಎಂಸಿಎಸ್ ಬ್ಯಾಂಕಿನ ವಿಶೇಷ ಕಾಯ೯ನಿವ೯ಹಣಾಧಿಕಾರಿ ಚಂದ್ರಶೇಖರ ಎಂ., ಪುರಸಭಾ ಸದಸ್ಯೆ ಮಮತಾ ಆನಂದ್ ಕೋಟೆಬಾಗಿಲು ಶ್ರೀ ಮಹಮ್ಮಾಯಿ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ರಾಜೇಶ್ ಕೋಟೆಗಾರ್, ನಡ್ಯೋಡಿ ದೈವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಗೋಪಾಲ ಪೂಜಾರಿ, ಚೇತನಾ ರಾಜೇಂದ್ರ ಹೆಗ್ಡೆ, ಶುಭ ಹಾರೈಸಿದರು. ಗೌರವಾಧ್ಯಕ್ಷ ಮಹಮ್ಮದ್ ಹನೀಫ್ ಉಪಸ್ಥಿತರಿದ್ದರು.
ಕನಾ೯ಟಕ ರಾ.ರೈ. ಸಂಘದ ಮಾಪಾ೯ಡಿ ಘಟಕದ ಅಧ್ಯಕ್ಷ ಸುರೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಜತೆ ಕಾಯ೯ದಶಿ೯ ವಾಸುದೇವ ಆಚಾಯ೯ ವರದಿ ವಾಚಿಸಿದರು. ಅಪಣಾ೯ ಪ್ರಸನ್ನ ಹೆಗ್ಡೆ, ರೇಖಾ ಸುರೇಂದ್ರ ಶೆಟ್ಟಿ, ರೋಹಿಣಿ ಶೆಟ್ಟಿ, ದಿವ್ಯಾ ಸನ್ಮಾನ ಪತ್ರ ವಾಚಿಸಿದರು. ಸತೀಶ್ ಹೊಸ್ಮಾರು ಕಾಯ೯ಕ್ರಮ ನಿರೂಪಿಸಿದರು. ಸುಜಯ ಎ. ಜೈನ್ ವಂದಿಸಿದರು.
ಸಭಾ ಕಾಯ೯ಕ್ರಮದ ಮೊದಲು ಮಕ್ಕಳಿಂದ ಸಾಂಸ್ಕೃತಿಕ ಕಾಯ೯ಕ್ರಮ ನಡೆಯಿತು.
ನಂತರ ಮಣಿ ಕೋಟೆಬಾಗಿಲು ನಿದೇ೯ಶನದ "ಓಂಕಾರ" ನಾಟಕ ಪ್ರದಶ೯ನಗೊಂಡಿತು.






0 Comments