ಪುತ್ತಿಗೆಯ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆದ 75ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ನೆರವೇರಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಸ್ಕೌಟ್ಸ್-ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್ ಸಿಂಧಿಯಾ, ಅಬ್ದುಲ್ ನಝೀರ್‌ರವರ ಧರ್ಮಪತ್ನಿ ಸಮೀರಾ ನಝೀರ್, ಗುಜರಾತಿನ ರಾಷ್ಟ್ರ ವೇದಿಕ್ ಮಿಷನ್ ಟ್ರಸ್ಟಿ ಸ್ವಾಮಿ ಧರ್ಮಬಂಧುಜಿ, ಉದ್ಯಮಿ ಶ್ರೀಪತಿ ಭಟ್, ಜಯಶ್ರೀ ಅಮರನಾಥ ಶೆಟ್ಟಿ, ಆಳ್ವಾಸ್ ಸಂಸ್ಥೆಯ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ್ ಆಳ್ವ ಉಪಸ್ಥಿತರಿದ್ದರು.
ನೌಕಾದಳದ ಕೆಡೆಟ್ ಕ್ಯಾಪ್ಟನ್ ಶಾಶ್ವತ್ ರೈ ಅವರಿಂದ ಗೌರವ ರಕ್ಷೆ ಸ್ವೀಕರಿಸಲಾಯಿತು. ಪೆರೇಡ್ ಕಮಾಂಡರ್ ಆಗಿ ಕೆಡೆಟ್ ಪುಷ್ಯ, ಪೈಲೆಟ್ಸ್ಗಳಾಗಿ ಅಮೃತ ಭಟ್, ಅಯನಾ, ತೇಜಸ್ವಿನಿ, ದೀಕ್ಷಾ ನಿರ್ವಹಿಸಿದರು. ಆಳ್ವಾಸ್‌ನ ವಿವಿಧ ಶಿಕ್ಷಣ ಸಂಸ್ಥೆಗಳ ೨೫,೦೦ಒ೦ಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕರು, ಸೇನಾ ಅಧಿಕಾರಿಗಳು, ಪೋಷಕರು, ಸಾರ್ವಜನಿಕರು ಬೃಹತ್ ಆಚರಣೆಗೆ ಸಾಕ್ಷಿಯಾದರು. ಆಳ್ವಾಸ್ ಪ.ಪೂ ಕಾಲೇಜಿನ ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯದ ಬೆಂಗಳೂರು, ಬೆಳಗಾವಿ, ಮೈಸೂರು, ಮಂಗಳೂರು, ಬಳ್ಳಾರಿ ಕಾಂಟಿಜೆಂಟ್‌ಗಳಿಂದ ೫೫೦ ಎನ್‌ಸಿಸಿ ಕೆಡೆಟ್‌ಗಳು, ಸೇನಾಧಿಕಾರಿಗಳು, ಯೋಧರು ಭಾಗವಹಿಸಿದರು.
ಕರ್ನಾಟಕದ ಭರತನಾಟ್ಯ, ಡೊಳ್ಳು ಕುಣಿತ, ಮಹಾರಾಷ್ಟ್ರದ ಲಾವಣಿ, ಕೇರಳದ ಮೋಹಿನಿಯಾಟ್ಟಂ, ಮಣ ಪುರದ ರಾಸ್‌ಲೀಲಾ, ಒಡಿಶಾದ ಓಡಿಸ್ಸಿ, ಪಶ್ಚಿಮ ಬಂಗಾಳಾದ ಪುರ್ಲಿಯೋ, ಕಥಕ್, ಕರ್ನಾಟಕದ ತೆಂಕು ಹಾಗೂ ಬಡಗು ತಿಟ್ಟಿನ ಯಕ್ಷಗಾನ, ಪಂಜಾಬಿನ ಬಾಂಗ್ರಾ, ಯೋಗ ಹಾಗೂ ಪಿರಮಿಡ್ ತಂಡಗಳು, ಜಾನಪದ ಕ್ರೀಡೆ ಮಲ್ಲಕಂಬದ ತಂಡಗಳು ವೇದಿಕೆಯನ್ನು ಅಲಂಕರಿಸಿದ್ದವು.
0 Comments