ರಾಣಿ ಅಬ್ಬಕ್ಕ ಕಿರು ಉದ್ಯಾವನದಲ್ಲಿ ಜವನೆರ್ ಬೆದ್ರ ಸ್ವಾತಂತ್ರ್ಯ ಸಂಭ್ರಮ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಚೌಟರ ಅರಮನೆಯ ಮುಂಭಾಗದಲ್ಲಿರುವ ರಾಣಿ ಅಬ್ಬಕ್ಕ ಕಿರು ಉದ್ಯಾನವನದಲ್ಲಿ ಜವನೆರ್ ಬೆದ್ರ ಸಂಘಟನೆಯ ವತಿಯಿಂದ ಸ್ವಾತಂತ್ರ ದಿನವನ್ನು ಆಚರಿಸಲಾಯಿತು. 

ಚೌಟ ಮನೆತನದ ಕುಲದೀಪ್ ಎಂ. ಧ್ವಜಾರೋಹಣಗೈದರು. 15ನೇ ಶತಮಾನದಲ್ಲಿಯೇ ಪರಕೀಯರಿಗೆ ಸಿಂಹ ಸ್ವಪ್ನವಾಗಿದ್ದ ಮೂಡುಬಿದಿರೆಯ ಚೌಟ ಮನೆತನದ ರಾಣಿ ಅಬ್ಬಕ್ಕ  ಹೆಸರು ಮೂಡುಬಿದಿರೆಯಲ್ಲಿ ಶಾಶ್ವತವಾಗಿರಲು ಜವನೆರ್ ಬೆದ್ರ ನೀಡಿದ ಕೊಡುಗೆ ಅನನ್ಯ. ಜವನೆರ್ ಬೆದ್ರದ ಸಂಘಟನೆಯಿಂದಾಗಿ ಅಬ್ಬಕ್ಕರ 2 ಪುತ್ಥಳಿ ಆಗಿದೆ ಎಂದರು. 

ಸಂಘಟನೆ ಸ್ಥಾಪಕಾಧ್ಯಕ್ಷ ಅಮರ್‌ಕೋಟೆ ಮಾತನಾಡಿ, ಮೂಡುಬಿದಿರೆ ಮಣ್ಣಿನ ಮಗಳು ರಾಣಿ ಅಬ್ಬಕ್ಕ ಅಭಿಯಾನ ಚೌಟರ ಅರಮನೆಯಲ್ಲಿ 4 ವರ್ಷದ ಹಿಂದೆ ನಾವು ಸಂಕಲ್ಪಿಸಿದ್ದು, ಅಭಿಯಾನ ಸಾರ್ಥಕವಾಗಿದೆ ಎಂದರು. 

ಚಿತ್ರಕಲಾವಿದ ಸಾತ್ವಿಕ್ ನೆಲ್ಲಿತೀರ್ಥ ರಾಣಿ ಅಬ್ಬಕ್ಕರ ವಿಶೇಷವಾದ ಕ್ಯಾನ್ವಸ್ ಆರ್ಟ್ ತಯಾರಿಸಿ ಚೌಟ ಮನೆತನಕ್ಕೆ ಹಸ್ತಾಂತರಿಸಿದರು. 

ಮಾಜಿ ಯೋಧ ಸುಬೇದಾರ್ ಮೇಜರ್ ರಾಜೇಂದ್ರ ಜಿ. ಅವರು ರಾಣಿ ಅಬ್ಬಕ್ಕರ ಕುರಿತು ಮಾತನಾಡಿದರು. 

ಪುರಸಭಾ ಮಾಜಿ ಸದಸ್ಯ ಮನೋಜ್ ಶೆಟ್ಟಿ, ಚೇತನ್ ಪೇಟೆಮನೆ ಉಪಸ್ಥಿತರಿದ್ದರು.

ಪ್ರತಿಶ್ ಕುಮಾರ್ ಸಮಗಾರ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments