ಸ್ವಾತಂತ್ರ್ಯ ಹೋರಾಟಗಾರ ವೀರ ವಿನಾಯಕ ದಾಮೋದರ ಸಾವರ್ಕರ್ ಅವರ ಭಾವಚಿತ್ರ ಅಳವಡಿಸಿದ ಹಿನ್ನೆಲೆಯಲ್ಲಿ ಶಿವಮೊಗ್ಗ ಮತ್ತೆ ಉದ್ವಿಗ್ನಗೊಂಡಿದ್ದು 144 ಸೆಕ್ಷನ್ ಹಾಕಲಾಗಿದೆ. ನಿನ್ನೆ ಶಿವಮೊಗ್ಗದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರ ಭಾವಚಿತ್ರವನ್ನು ಹಾಕಲಾಗಿತ್ತು. ಇದನ್ನು ಕಿಡಿಗೇಡಿಗಳು ಹರಿದು ಹಾಕಿದ್ದು ಇದರ ಬೆನ್ನಿಗೆ ಟಿಪ್ಪು ಬ್ಯಾನರನ್ನು ಕೂಡ ಹಿಂದೂಪರ ಸಂಘಟನೆಗಳು ಹರಿದು ಹಾಕಿದ್ದು ಉಭಯ ಸಂಘಟನೆಗಳ ವಿರುದ್ಧವೂ ಎಫ್ಐಆರ್ ದಾಖಲಾಗಿತ್ತು.ಇಂದು ಮತ್ತೆ ಶಿವಮೊಗ್ಗದಲ್ಲಿ ವೀರ್ ಸಾವರ್ಕರ್ ಅವರ ಭಾವಚಿತ್ರವನ್ನು ಹಾಕಲಾಗಿದ್ದು ಅದರ ವಿರುದ್ಧ ಕೆಲ ಸಂಘಟನೆಗಳು ಬ್ಯಾರಿಕೇಟ್ ಹಾರಿ ಧ್ವಂಸ ಮಾಡಲು ಯತ್ನಿಸಿದ್ದವು. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಪೊಲೀಸರು ಪ್ರತಿಭಟನಾಕಾರರು ಹಾಗೂ ದಾಳಿಕೋರರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ. ಗುಂಪು ಚದುರಿಸಿದ ಪೊಲೀಸರು ಪರಿಸ್ಥಿತಿಯನ್ನು ಸದ್ಯದ ಮಟ್ಟಿಗೆ ತಿಳಿಗೊಳಿಸಿದರು.ಆದರೂ ಮುಂದಿನ ಜಾಗರೂಕತೆಗಾಗಿ ಜಿಲ್ಲೆಯಾದ್ಯಂತ 144ಸೆಕ್ಷನ್ ಹಾಕಿದ್ದಾರೆ.
0 Comments