ಬಿಲ್ಲವರ ಪರಮ ಪವಿತ್ರ ಕ್ಷೇತ್ರವಾಗಿರುವ ಗೆಜ್ಜೆಗಿರಿ ನಂದನ ಬಿತ್ತಿಲು ಕ್ಷೇತ್ರದ ಹೆಸರಿನಲ್ಲಿ ಮುಸ್ಲಿಂ ವ್ಯಕ್ತಿಗಳು ನಡೆಸಿದ್ದ ಅಗರಬತ್ತಿ ಉದ್ಯಮದ ವಿರುದ್ಧ ಗೆಜ್ಜೆಗಿರಿ ಆಡಳಿತ ಮಂಡಳಿ ಪುತ್ತೂರು ವಿಭಾಗದ ಡಿವೈಎಸ್ಪಿ ಕಛೇರಿಯಲ್ಲಿ ಕೇಸ್ ದಾಖಲಿಸಿದೆ.
ಒಂದೆರಡು ವರ್ಷಗಳಿಂದ ಗೆಜ್ಜೆಗಿರಿ ಹೆಸರಿನಲ್ಲಿ ಮುಸ್ಲಿಂ ವ್ಯಕ್ತಿಯೋರ್ವರು ಅನುಮತಿ ಇಲ್ಲದೆ ಅಗರಬತ್ತಿ ತಯಾರಿಸುತ್ತಿದ್ದು ಇದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಗೆಜ್ಜೆಗಿರಿ ಹೆಸರಿನ ಬಳಕೆಯಿಂದ ಬಿಲ್ಲವ ಸಮಾಜ ಭಾವನಾತ್ಮಕವಾಗಿ ಈ ಅಗರಬತ್ತಿಯನ್ನು ಖರೀದಿಸುತ್ತಾರೆ ಎಂಬ ಯೋಚನೆ ಇಟ್ಟುಕೊಂಡಿರುವ ಉದ್ಯಮಿಗಳು ಈ ಹುನ್ನಾರಕ್ಕೆ ಕೈಹಾಕಿದ್ದರು. ಆದರೆ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಖಂಡಿಸಿದ್ದ ಹಿಂದೂಪರ ಸಂಘಟನೆಗಳು ಹಾಗೂ ಕೆಲ ಸಂಸ್ಥೆಗಳು ಶೀಘ್ರದಲ್ಲೇ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತ್ತು. ಆದರೆ ಇದರ ಬಗ್ಗೆ ಯಾವುದೇ ಕ್ರಮವನ್ನು ಕೈಗೊಳ್ಳದೆ ಕೇವಲ ಎಚ್ಚರಿಕೆ ನೀಡಿದ್ದ ಆಡಳಿತ ಮಂಡಳಿ ವಿರುದ್ಧವೂ ಆಕ್ರೋಶ ಕೇಳಿ ಬಂದಿತ್ತು. ಇದೀಗ ಮತ್ತೆ ಈ ಉದ್ಯಮವು ಮುನ್ನಲೆಗೆ ಬಂದಿದ್ದು ಸ್ವತಃ ಆಡಳಿತ ಮಂಡಳಿಯೇ ಎಚ್ಚೆತ್ತು ಡಿವೈಎಸ್ಪಿ ಕಛೇರಿಯಲ್ಲಿ ಪ್ರಕರಣ ದಾಖಲಿಸಿದೆ. ಕೂಡಲೇ ಗೆಜ್ಜೆಗಿರಿ ಹೆಸರಿನಲ್ಲಿ ಇರುವ ಅಗರಬತ್ತಿಯನ್ನು ನಿಷೇಧಿಸಿ ಇದರ ಹಿಂದಿರುವ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ದೂರಿನಲ್ಲಿ ಕೋರಿದೆ.
0 Comments