ಅಂತಾರಾಜ್ಯ ಮಾದಕ ವಸ್ತು ಸಾಗಾಟದ ಪ್ರಮುಖ ರೂವಾರಿ ಪೊಲೀಸ್ ವಶಕ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 


ಕಾಸರಗೋಡು: ಅಂತಾರಾಜ್ಯ ಮಾದಕ ವಸ್ತು ಸಾಗಾಟ ತಂಡವನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಅನಂಗೂರು ಟಿ.ವಿ. ಸ್ಟೇಷನ್ ರಸ್ತೆಯ ಅಹಮ್ಮದ್ ಕಬೀರ್(22) ಬಂಧಿತ ಆರೋಪಿ. ಬಂಧಿತನಿಂದ 15 ಗ್ರಾಂ. ಎಂಡಿಎಂಎ ಮಾದಕ ವಸ್ತು ಸಹಿತ ನುಳ್ಳಿಪ್ಪಾಡಿಯಿಂದ ಈತನನ್ನು ಬಂಧಿಸಲಾಗಿದೆ. 

ಈತ ಗೋವಾದಿಂದ ಕಾಸರಗೋಡಿಗೆ ಮಾದಕ ವಸ್ತು ಸಾಗಾಟ ಜಾಲದ ಪ್ರಮುಖ ರೂವಾರಿಯಾಗಿದ್ದಾನೆ.

ಆರೋಪಿ ವಿರುದ್ಧ ಗಾಂಜಾ ಹಾಗೂ ಎಂಡಿಎಂಎ ಸಾಗಾಟದ ಬಗ್ಗೆ ಕಾಸರಗೋಡು ಅಬಕಾರಿ ದಳ ಈ ಹಿಂದೆ ಪ್ರಕರಣ ದಾಖಲಿಸಿ ಕೊಂಡಿತ್ತು.

Post a Comment

0 Comments