ವರ್ಷದ ಹಿಂದೆ ಆಕಸ್ಮಿಕವಾಗಿ ದೇವಸ್ಥಾನ ಪ್ರವೇಶಿಸಿದ ವಿನಯ ಎಂಬ ಮೂರು ವರ್ಷದ ಬಾಲಕ ಕುಟುಂಬಕ್ಕೆ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಬಂಪರ್ ಕೊಡುಗೆ ನೀಡಿದ್ದಾರೆ. ಕೊಪ್ಪಳ ಜಿಲ್ಲಾ ಪ್ರವಾಸದಲ್ಲಿರುವ ಸಚಿವ ಕೋಟ ಬಾಲಕ ವಿನಯ ಹಾಗೂ ಆತನ ಕುಟುಂಬವನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಕುಟುಂಬದ ಬೇಡಿಕೆಯಂತೆ ಬಾಲಕ ಎಲ್ಲಾ ತೆರನಾದ ವಿದ್ಯಾಭ್ಯಾಸವನ್ನು ಸರ್ಕಾರವೇ ಭರಿಸುವುದಲ್ಲದೆ ಕುಟುಂಬಕ್ಕೆ ಸ್ವಂತ ಮನೆ, ಸ್ವ ಉದ್ಯೋಗಕ್ಕೆ ನೆರವು ಸಹಿತ ಎಲ್ಲಾ ಸಹಕಾರವನ್ನು ಸಮಾಜ ಕಲ್ಯಾಣ ಇಲಾಖೆಯ ಮೂಲಕವೇ ಮಾಡಲಾಗುವುದು ಹೇಳಿದರು.
ಸಚಿವರು ಹೇಳಿದ್ದು...
"ಕೊಪ್ಪಳ ಜಿಲ್ಲೆಗೆ ಭೇಟಿಯಿತ್ತಾಗ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ "ವಿನಯ ಸಾಮರಸ್ಯ"ಯೋಜನೆಯ ಅಸ್ಪ್ರಶ್ಯತೆಗೆ ಒಳಗಾದ 3 ವರ್ಷದ ಬಾಲಕ ವಿನಯನನ್ನು ಅವನ ತಂದೆ ತಾಯಿಯೊಂದಿಗೆ ಭೇಟಿಯಾದೆ.ವಿನಯನ ಉನ್ನತ ಶಿಕ್ಷಣವೂ ಸೇರಿದಂತೆ ಎಲ್ಲಾ ವೆಚ್ಚ ಸರಕಾರ ಭರಿಸಲಿದೆ ಎಂಬ ವಿಶ್ವಾಸದ ಮಾತು ಹೇಳಿದ್ದೆ.ವಿನಯನ ತಂದೆ ತಾಯಿಯ ಬೇಡಿಕೆಯಂತೆ ಅವರ ಕುಟುಂಬಕ್ಕೆ ಮನೆ ಸ್ವಂತ ಉದ್ಯಮಕ್ಕೆ ಇಲಾಖಾ ನೆರವು ನೀಡುವುದಾಗಿ ತಿಳಿಸಿದೆ.ವಿನಯ ಸಾಮರಸ್ಯ ಯೋಜನೆಯ ಮೂಲಕ ಈ ರಾಜ್ಯದಲ್ಲಿರುವ ಮನುಕುಲದ ಅಸ್ಪ್ರಶ್ಯತೆ ನಿವಾರಣೆ ಆಗಬೇಕೆಂದು ನನ್ನ ಮತ್ತು ನಮ್ಮ ಸರಕಾರದ ಬಯಕೆ" ಎಂದು ಸಚಿವ ಕೋಟ ಹೇಳಿಕೊಂಡಿದ್ದಾರೆ.
ಬಾಲಕ ವಿನಯ ಈಗ ಅಸ್ಪ್ರಶ್ಯತೆ ನಿವಾರಣೆಗೆ ಸ್ಪೂರ್ತಿಯಾಗಿದ್ದಾನೆ. ಆತನ ಹೆಸರಿನಲ್ಲೇ ರಾಜ್ಯ ಸರ್ಕಾರವು "ವಿನಯ ಸಾಮರಸ್ಯ ಯೋಜನೆ" ಜಾರಿಗೆ ತಂದಿದೆ. ಈ ಮೂಲಕ ಅಸ್ಪ್ರಶ್ಯತೆ ತೊಡೆದು ಹಾಕಲು ಸರ್ಕಾರ ಬಾಲಕ ವಿನಯನನ್ನು ಕ್ರಾಂತಿಕಾರಿಯಾಗಿ ಬಳಸಿಕೊಂಡಿದೆ.
:ವೈಭವ ನ್ಯೂಸ್
0 Comments