ವಾಲ್ಪಾಡಿ ದ್ವಿತೀಯ ಗ್ರಾಮ ಸಭೆ- ವಿವಿಧ ಇಲಾಖಾಧಿಕಾರಿಗಳಿಂದ ಸೌಲಭ್ಯ-ಸವಲತ್ತುಗಳ ಬಗ್ಗೆ ಮಾರ್ಗದರ್ಶನ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ : ವಿಧವಾ, ವೃದ್ದಾಪ್ಯವೇತನ ಮತ್ತು ಇತರ ಪಿಂಚಣಿ ಯೋಜನೆಗಳನ್ನು ನೀಡಲಾಗುತ್ತಿರುವ ಮೊತ್ತದ ಪ್ರಮಾಣ ರೂ. 600 ರಿಂದ ಏರಿಕೆಯಾಗಿದ್ದರೂ ಕಾರಣಾಂತರಗಳಿಂದ ಹಳೆಯ ಮೊತ್ತವೇ ಪಾವತಿ ಆಗುತ್ತಿದ್ದಲ್ಲಿ ಈ ವ್ಯತ್ಯಾಸವನ್ನು ಸರಿಪಡಿಸಲು ತಕ್ಷಣವೇ ತಮ್ಮ ಪಡಿತರ ಮತ್ತು ಆಧಾರ್ ಕಾರ್ಡ್ ಸಹಿತ ಗ್ರಾಮಕರಣಿಕರನ್ನು ಭೇಟಿಯಾಗಿ ಅರ್ಜಿ ಸಲ್ಲಿಸಲು ವಾಲ್ಪಾಡಿ ಗ್ರಾಮ 

ಲೆಕ್ಕಿಗರಾದ ನಿಶ್ಮಿತಾ ಅವರು. 

ಶಿರ್ತಾಡಿ ಅರ್ಜುನಾಪುರ ದೇವಸ್ಥಾನದ ಬಳಿಯ ಬುಧವಾರ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ಕುಮಾರ ಅವರ ಅಧ್ಯಕ್ಷತೆಯಲ್ಲಿ ನಡೆದ ದ್ವಿತೀಯ ಸುತ್ತಿನ ಗ್ರಾಮಸಭೆಯಲ್ಲಿ ಅವರು ಮಾಹಿತಿ ನೀಡಿ, ವಿಚ್ಛೇದಿತರು , ಗಂಡನಿಂದ ಬೇರ್ಪಟ್ಟವರು ಮನಸ್ವಿನಿ ಯೋಜನೆ, ಮಂಗಳಮುಖಿಯರು ಮೈತ್ರಿ ಯೋಜನೆ ಯಡಿ ಪಿಂಚಣಿ ಪಡೆಯಲು ಅವಕಾಶವಿದೆ ಎಂದು ಹೇಳಿದರು.

ಅದೇ ರೀತಿ ಬಿಪಿಎಲ್ ಕಾರ್ಡ್ ನ 60 ವರ್ಷದೊಳಗಿನವರು ನಿಧನ ಹೊಂದಿದಾಗ ಏಕಗಂಟಿನ ಪರಿಹಾರಧನ, ಪ್ರಾಕೃತಿಕ ವಿಕೋಪದಿಂದಾಗುವ ನಷ್ಟಕ್ಕೆ ಪರಿಹಾರ ಧನ ಪಡೆಯಲು ಇರುವ ಅವಕಾಶಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿದೆ. 


ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮಂಜುನಾಥ್ ನೋಡಲ್ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು.

ಉಪವಲಯ ಅರಣ್ಯ ಅಧಿಕಾರಿ ಕಾವ್ಯಾ ಆರ್. ಗ್ರಾಮಸ್ಥರು ಇಲಾಖೆಯಿಂದ ಬಹುಬಗೆಯ ಗಿಡಗಳನ್ನು ಪಡೆದು ಬೆಳೆಸಲು ಇರುವ ಯೋಜನೆ , ಪ.ಜಾ.ಪ.ಪಂ. ವರ್ಗದವರು ಸಬ್ಸಿಡಿಯಲ್ಲಿ ಅಡುಗೆ ಅನಿಲ ಇರುವ ಯೋಜನೆ ಬಗ್ಗೆ ವಿವರಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶುಭಾ, 

ಇಲಾಖೆ ಸಂಜು ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದ್ದಾರೆ.

Post a Comment

0 Comments