ಮೂಡುಬಿದಿರೆ: ಯುವಕ ಮಂಡಲ, ಪಡುಮಾರ್ನಾಡು ಇದರ ಸುವರ್ಣ ಮಹೋತ್ಸವದಂಗವಾಗಿ ಅಮನಬೆಟ್ಟಿನಲ್ಲಿ ಮಹಾವೀರ ಹಿರಿಯ ಪ್ರಾಥಮಿಕ ಶಾಲೆಯ ನವೀಕೃತ ಪಡುಮಾರ್ನಾಡಿನ ಕಟ್ಟಡವನ್ನು ಮೂಡುಬಿದಿರೆ ಜೈನ ಮಠದ ಸೃಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸಿದರು.
ನಂತರ ದಿ.ಜಯಪ್ರಕಾಶ ದೇವಾಡಿಗ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ರಂಗಮಂದಿರದಲ್ಲಿ ನಡೆದ ಗ್ರಾಮದ ಜನರ ಮೇಧಾ ಶಕ್ತಿ, ಪ್ರಜ್ಞಾ ಶಕ್ತಿ, ಭುಜ ಶಕ್ತಿ. ಆರ್ಥಿಕ ಸ೦ಪು. ಒಗ್ಗೂಡಿಸುವ ಪ್ರಗತಿಯಾಗುತ್ತದೆ. ಯುವಜನರು ತಮ್ಮ ಶಕ್ತಿ ಮತ್ತು ಯುಕ್ತಿಯನ್ನು ಸಮಾಜದ ಎಳಿಗೆಗಾಗಿ ಸಮರ್ಪಿಸಬೇಕು ಎಂದು ಹೇಳಿದರು.
ಶಾಲೆಯ ಸಂಚಾಲಕ ಎಂ.ಆರ್. ಬಲ್ಲಾಳ್ ಸಭಾಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಹೊಪಾಲಬೆಟ್ಟದ ಅನುವಂಶೀಕ ಆಡಳಿತ ಮೊಕ್ತಸರ ರಾಜೇಶ್ ಬಲ್ಲಾಳ್, ಮೂಡುಬಿದಿರೆ ಜೈನ ಪ್ರೌಢಶಾಲೆಯ ವಿಶ್ರಾಂತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳಪಡುಮಾರ್ನಾಡು ಗ್ಲಾವರ ಅಧ್ಯಕ್ಷ ಕಲ್ಯಾಣಿ, ಉಪಾಧ್ಯಕ್ಷ ಅಭಿನಂದನ್ ಏನ್, ಬಲ್ವಾನ್, ಸದಸ್ಯರಾದ ಪ್ರವೀಳಾ ಜೆ, ಕುಸುಮಾ ಮುಖ್ಯ ಅತಿಥಿಗಳಾಗಿದ್ದರು.
ಯುವಕ ಮಂಡಲದ ಹಿರಿಯ ಆಧಾರ ಸ್ತಂಭಗಳಾದ ದಾಮೋದರ ಕೆ., ಯತೀಂದ್ರ ರಾವ್ ನಾಡಿಮನೆ, ಜಯ ಬಿ., ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಉದ್ದು ರಾಘಸಿ, ಪೂಜಾರಿ, ಅಧ್ಯಕ್ಷ ಮೋಹನ್ ಮಾನಾಡ್, ಕಾರ್ಯದರ್ಶಿ ಹೇಮರಾಜ್ ರಾವ್,ಯುವಕ ಮಂಡಲದ ಅಧ್ಯಕ್ಷ ರಮೇಶ್ ಎಸ್. ಶೆಟ್ಟಿ ಉಪಸ್ಥಿತರಿದ್ದರು.
0 Comments