ಕಡಲ ಪ್ರೇಮಿಗಳಿಗೆ ಭಾರೀ ನಿರಾಸೆ! ಅಲೆಗಳ ಅಬ್ಬರಕ್ಕೆ ಛಿದ್ರವಾದ ತೇಲುವ ಸೇತುವೆ!

ಜಾಹೀರಾತು/Advertisment
ಜಾಹೀರಾತು/Advertisment

 


ಉಡುಪಿ: ರಾಜ್ಯದಲ್ಲೇ ಪ್ರಥಮ ಬಾರಿಗೆ ಉಡುಪಿಯ ಮಲ್ಪೆ ಬೀಚ್‌ನಲ್ಲಿ ಅಳವಡಿಸಲಾಗಿದ್ದ ತೇಲುವ ಸೇತುವೆಯ ಉದ್ಘಾಟನೆಗೊಂಡ ಮೂರೇ ದಿನಕ್ಕೆ ಸಮುದ್ರ ಪಾಲಾಗಿದೆ. 

ಸುಮಾರು 80 ಲಕ್ಷ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿದೆ.

ಇದೀಗ ಸೇತುವೆಯ ಉದ್ಘಾಟನೆಯಾದ ಮೂರೇ ದಿನಕ್ಕೆ ಅಲೆಗಳ ಭೀಕರ ಹೊಡೆತಕ್ಕೆ ಸಿಲುಕಿ, ತೀವ್ರವಾಗಿ ಹಾನಿ ಸಂಭವಿಸಿದೆ, ಸೇತುವೆಯ ಬಿಡಿಭಾಗಗಳು ಸಮುದ್ರ ಪಾಲಾಗಿದೆ. ನಿನ್ನೆ ಬೆಳಿಗ್ಗೆಯಿಂದಲೇ ಕಡಲು ಪ್ರಕ್ಷುಬ್ಧವಾಗಿದ್ದು, ನಿನ್ನೆ ಸಂಜೆಯಿಂದಲೇ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ ತೇಲು ಸೇತುವೆ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದರೂ ಅಲೆಗಳ ಅಬ್ಬರ ಹೆಚ್ಚಿರುವ ಕಾರಣ ಜನರ ಸುರಕ್ಷತೆ ದೃಷ್ಟಿಯಿಂದ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

Post a Comment

0 Comments