ಸುಳ್ಳು ಸುದ್ಧಿ ವೈರಲ್ ಆಯಿತು, ಮಲ್ಪೆ ಫ್ಲೋಟಿಂಗ್ ಸೇತುವೆಗೆ ಯಾವುದೇ ಹಾನಿ ಆಗಿಲ್ಲ! ಹಾಗಾದರೆ ಅಲ್ಲಿ ಆಗಿದ್ದೇನು?

ಜಾಹೀರಾತು/Advertisment
ಜಾಹೀರಾತು/Advertisment

 


ಉಡುಪಿ: ತೀವ್ರ ತರದ ಸೈಕ್ಲೊನ್ ಇದ್ದ ಕಾರಣ ಜಿಲ್ಲಾಡಳಿತದಿಂದ ಸೇತುವೆ ತೆರವುಗೊಳಿಸುವಂತೆ ಸೂಚನೆ ನೀಡಿತ್ತು. ಈ ಕಾರಣದಿಂದ ತೇಲುವ ಸೇತುವೆಯನ್ನು ತೆರವುಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದೇವು. ಈ ಸಂದರ್ಭದಲ್ಲಿ ತೆರವುಗೊಳಿಸುವ ಕಾರ್ಯದಲ್ಲಿರುವಾಗ ಇಂತಹ ಪ್ರಕ್ರಿಯೆಗಳು ಸಾಮಾನ್ಯವಾಗಿ ಎದುರಾಗುತ್ತವೆ. 

ಸೇತುವೆಯಲ್ಲಿನ ಯಾವುದೇ ಭಾಗಗಳು ಹಾನಿಯಾಗಿಲ್ಲ. ತೇಲು ಸೇತುವೆ ಈಗಾಗಲೇ ಹಾನಿಯಾಗಿದೆ ಎಂದು ಸುದ್ದಿ ವಾಹಿನಿಗಳಲ್ಲಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ಸುದ್ದಿಯಾಗಿದೆ. ಇದನ್ನು ಯಾರೂ ನಂಬಬೇಕಾಗಿಲ್ಲ  ಎಂದು ಮಲ್ಪೆ ಬೀಚ್ ನ ನಿರ್ವಾಹಕರಾದ ಸುದೇಶ್ ಶೆಟ್ಟಿ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 

ಕಳೆದ ಎರಡು ದಿನಗಳಿಂದ ತೀವ್ರ ತರವಾದ ಸೈಕ್ಲೋನ್  ಸಮುದ್ರ ತೀರದಲ್ಲಿ ಅಪ್ಪಳಿಸುತ್ತಿದ್ದು, ಈ ನಿಮಿತ್ತ ಉಡುಪಿ ಜಿಲ್ಲಾಡಳಿತ ಯಾರಿಗೂ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿತ್ತು. ಮಾತ್ರವಲ್ಲದೆ  ಬೀಚ್ ಗಳ ಪಕ್ಕದಲ್ಲಿ ಯಾವುದೇ ತೆರನಾದ ಕ್ರೀಡೆ, ಮನೋರಂಜನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಬಾರದೆಂಬ ಸೂಚನೆಯನ್ನು  ನೀಡಿತ್ತು. ಮುಂದಿನ ಸೂಚನೆಯವರೆಗೆ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಬಾರದೆಂಬ ಆದೇಶದ ನಿಮಿತ್ತ ತೇಲುವ ಸೇತುವೆ ಕಾರ್ಯವನ್ನು ಸ್ಥಗಿತಗೊಳಿಸಿದ್ದೇವು. 

ಸುಮಾರು ಮೂರು ದಿನಗಳ ಕಾಲ ಈ ಸೇತುವೆಯನ್ನು ವಿಂಗಡಿಸಲು ಹಾಗೂ ಮರು ಜೋಡಿಸಲು ಕಾಲಾವಕಾಶ ಬೇಕಾಗಿತ್ತು. ಈ ನಿಟ್ಟಿನಲ್ಲಿ ಮತ್ತೊಮ್ಮೆ ಜಿಲ್ಲಾಡಳಿತದ  ಸೂಚನೆಯ ನಂತರ ಮತ್ತೆ ಈ ಸೇತುವೆಯನ್ನು ಜೋಡಿಸಲಾಗುವುದು ಹಾಗೂ ಜನರ ಮನೋರಂಜನೆಗೆ ಅರ್ಪಿಸಲಾಗುವುದು. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ. ಯಾವುದೇ ಹಾನಿಯು ನಡೆದಿಲ್ಲ, ನಷ್ಟ ಸಹ ಉಂಟಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

Post a Comment

0 Comments