ಮಡುಬಿದಿರೆ: ದ.ಕ. ಜಿ. ಪಂ. ಹಿ. ಪ್ರಾ. ಶಾಲೆ ಗಾಂಧಿನಗರದಲ್ಲಿ ಮಕ್ಕಳ ಪೋಷಕರು ರಂಗೋಲಿ ಹಾಕಿ, ತಳಿರು ತೋರಣ ಕಟ್ಟಿ ಶೃಂಗರಗೊಳಿಸಿರುವ ಶಾಲೆಗೆ ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿಗೆ ಹೂ ನೀಡಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು. ಒಂದನೇ ತರಗತಿಯ ಪುಟ್ಟ ಮಕ್ಕಳಿಂದ ದೀಪ ಬೆಳಗಿಸುವುದರೊಂದಿಗೆ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆಯನ್ನು ನೀಡಿದರು.
ಉದ್ಯಮಿ ಪ್ರಸನ್ನ ಅವರು ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ದಾನವಾಗಿ ನೀಡಿದರು.
ವಾರ್ಡ್ ಸದಸ್ಯೆ ದಿವ್ಯ ಜಗದೀಶ್ ಅವರು ವಿದ್ಯಾರ್ಥಿಗಳಿಗೆ ಲೇಖನ ಸಾಮಾಗ್ರಿಗಳನ್ನು ನೀಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುನೀತಾ, ನೇತಾಜಿ ಬ್ರಿಗೇಡ್ಸ್ ಸಂಚಾಲಕ, ಶಾಲೆಯ ಹಳೆ ವಿದ್ಯಾರ್ಥಿ ರಾಹುಲ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಿಹಿ ಹಂಚುವುದರೊಂದಿಗೆ ಪ್ರಾರಂಭೋತ್ಸವವನ್ನ ಉಲ್ಲಾಸದಿಂದ ಆಚರಿಸಿ. ಮಳೆ ಬಿಲ್ಲು ಕಲಿಕಾ ಚೇತರಿಕೆ ಉಪಕ್ರಮ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
0 Comments