ಸರಕಾರ ಕನ್ನಡ ಮಾದ್ಯಮ ಶಾಲೆಗಳನ್ನು ಉಳಿಸಿ ಬೆಳಸಬೇಕು - ಅಭಯಚಂದ್ರ ಜೈನ್

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ : ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯಲ್ಲಿ ನೂತನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ದೀಪ ಬೆಳಗಿಸುವ ಮೂಲಕ ಚಾಲನೆಯನ್ನು ನೀಡಿ ಶಿಕ್ಷಣ ಇಂದಿಗೆ ಅತ್ಯಂತ ಮುಖ್ಯ. ಬಡತನದಲ್ಲಿದ್ದರೂ ವಿದ್ಯಾಭ್ಯಾಸ ಕಲಿತು ಅನೇಕ ಸಾಧಕರು ಸಾಧನೆಯನ್ನು ಮಾಡಿದ್ದಾರೆ. ಸರಕಾರದ ಸೌಲಭ್ಯಗಳನ್ನು ಪಡೆದು ವಿದ್ಯಾಭ್ಯಾಸ ಮಾಡಬೇಕು ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆ ಕಳೆದ ೫೬ ವರ್ಷಗಳಿಂದ ಬಡವ ಬಲ್ಲಿದ ಎಂಬ ಭೇದಭಾವ ಇಲ್ಲದೇ ಶಿಕ್ಷಣ ನೀಡುತ್ತಿದೆ ಪ್ರೌಢಶಾಲೆಯ ಕೆಲಸದಲ್ಲಿ ಪೋಷಕರು, ಸಮಾಜ ಕೈಜೋಡಿಸಿ ಉತ್ತಮ ಶಿಕ್ಷಣ ಸಿಗುವಂತೆ ಮಾಡೋಣ ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕ ಕೆ. ವಿಶ್ವನಾಥ ಪ್ರಭು ಮಾತನಾಡಿ  "ಅವಕಾಶವನ್ನು ಬಳಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಹಾರೈಸಿದರು. ಪುರಸಭಾ ಸದಸ್ಯೆ  ಸ್ವಾತಿ ಪ್ರಭು ಶುಭ ಹಾರೈಸಿದರು

ಇನ್ನರ್‌ವ್ಹೀಲ್ ಕ್ಲಬ್‌ನ ನಿಯೋಜಿತ ಅಧ್ಯಕ್ಷೆ  ರಮ್ಯ ವಿಕಾಸ್ ಹಾಗೂ ನಿಯೋಜಿತ ಕಾರ್ಯದರ್ಶಿ  ಸ್ವಾತಿ ಬೋರ್ಕರ್ ಇವರು ಇನ್ನರ್‌ಮ್ಹೀಲ್ ಕ್ಲಬ್ ವತಿಯಿಂದ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಬಾಹುಬಲಿ.ಎಂ, ದಾಮೋದರ ಆಚಾರ್ಯ,  ಪುಷ್ಪರಾಜ್, ಅಶೋಕ್ ಕುಮಾರ್  ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ  ಪದ್ಮಜಾ ಸ್ವಾಗತಿಸಿ, ಶಿಕ್ಷಕ ಅಣ್ಣು ಇವರು ಡೆಂಗ್ಯೂ ಜಾಗೃತಿ ಬಗ್ಗೆ ಮಾಹಿತಿ ನೀಡಿದರು. ಅಧ್ಯಾಪಕ  ಕಿರಣ್ ಕುಮಾರ್ ಧನ್ಯವಾದಗೈದು ಶಿಕ್ಷಕ ಜನಾರ್ಧನ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments